ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆ ಮಾಡುತ್ತಿದ್ದ ನಾಲ್ವರ ಮೇಲೆ ಗುಡ್ಡ ಕುಸಿದು ಓರ್ವ ಮಣ್ಣಿನಡಿ ಸಿಲುಕಿದ ಘಟನೆ ಜ.25 ರಂದು ನಡೆದಿದ್ದು, ಇಂದಿಗೆ 10 ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅನೇಕ ಸಂಘಟನೆಗಳು ಸ್ಥಳಕ್ಕೆ ತೆರಳಿ ಯುವಕನ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಫೆ.2ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪರ ಪ್ರತಿನಿಧಿಯಾಗಿ ಪ್ರೋಕ್ಯುರೇಟರ್ ಗಳಾದ ವಂ.ಫಾ| ಟೋಮಿ ಇವರ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಪ್ರವೃತ್ತರಾಗಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದರು.ಉಜಿರೆ ಸಂತ ಜಾರ್ಜ್ ಚರ್ಚ್ನ ಸದಸ್ಯರ ಜೊತೆಗೂಡಿ ತೆರಳಿ ಜೊತೆಗೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯವರ ತಂಡ ಹಗಲಿರುಳು ದುಡಿಯುತ್ತಿದ್ದಾರೆ.