ನೆರಿಯ: ಪ್ರಾಚೀನ ಐತಿಹಾಸಿಕ ಜೈನ ಪೂಜಾ ಕೇಂದ್ರವಾಗಿ ಮೆರೆಯುತ್ತಿರುವ ಬೈಲಂಗಡಿ ಬಸದಿಯಲ್ಲಿ ಭಾರತೀಯ ಜೈನ್ ಮಿಲನ್ ಇದರ ವಲಯ 8ರ ಶಾಖೆಗಳಲ್ಲಿ ಒಂದಾದ ಬೆಳ್ತಂಗಡಿ ಜೈನ್ ಮಿಲನ್ ಹಾಗೂ ಊರವರ ಸಹಕಾರದೊಂದಿಗೆ ‘ಸ್ವಚ್ಛ ಜಿನ ಮಂದಿರ’ ಎಂಬ ಪರಿಕಲ್ಪನೆಯಡಿಯಲ್ಲಿ ಶ್ರಮದಾನ ಕಾರ್ಯಕ್ರಮ ಶ್ರೀ ಪಾರ್ಶ್ವನಾಥ ಸ್ವಾಮಿಯ ಸಮ್ಮುಖದಲ್ಲಿ ಜರಗಿತು.
ಜೈನ್ ಮಿಲನ್ ಅಧ್ಯಕ್ಷ ಶಾಂತಿರಾಜ್ ಜೈನ್, ವಲಯ 8ರ ನಿರ್ದೇಶಕ ಸೋಮಶೇಖರ್ ಶೆಟ್ಟಿ, ಮಿಲನ್ನ ಹಿರಿಯ ಸದಸ್ಯ ಜೀವಂಧರ್ ಜೈನ್, ಮಿಲನ್ ಸದಸ್ಯರಾದ ಕಿಶೋರ್ ಹೆಗ್ಡೆ ಮಾತನಾಡಿ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಿಲನ್ನ ಕೋಶಾಧಿಕಾರಿ ನಿಖಿತ್ ಜೈನ್, ಜೊತೆ ಕಾರ್ಯದರ್ಶಿ ಅಜಯ್ ಕುಮಾರ್ ಜೈನ್, ಮಿಲನ್ ಸದ್ಯಸರಾದ ಸಿದ್ದಾಂತ್ ಕೀರ್ತಿ ರಾಜ್ ಜೈನ್, ಮಿಥುನ್ ಜೈನ್, ಶ್ರೇಯಾಂಕ್ ಜೈನ್, ಸ್ಥಳೀಯರಾದ ಅಶೋಕ್ ಕುಮಾರ್ ಜೈನ್, ಮಿತ್ರಸೇನ ಜೈನ್, ಬಾಲಚಂದ್ರ ಜೈನ್, ವೀರೇಂದ್ರ ಜೈನ್, ಮೊದಲಾದವರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ್ದರು.
ಮಿಲನ್ ಕಾರ್ಯದರ್ಶಿ ಸಂಪತ್ ಕುಮಾರ್ ಸ್ವಾಗತಿಸಿ, ಪೂಜಿತಾ ಅಜಯ್ ಕುಮಾರ್ ವಂದಿಸಿದರು.