ಉಜಿರೆ : ಇಲ್ಲಿಯ ಮಾಚಾರು ಕೋರ್ಯಾರುಗುತ್ತು ಶ್ರೀವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ ಹಾಗೂ ವರ್ಷಾವಧಿ ದೊಂಪದಬಲಿ ಉತ್ಸವ ಫೆ .16 ರಿಂದ 18ರವರೆಗೆ ಜರಗಲಿದೆ. ಇದರ ಅಂಗವಾಗಿ ಸಮಿತಿಯ ಪದಾಧಿಕಾರಿಗಳು ಮತ್ತು ಊರವರ ಸಮಾಲೋಚನಾ ಸಭೆಯು ದೈಸ್ಥಾನದವ ವಠಾರದಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಜರಗಿತು.
ಆಡಳಿತ ಮೊಕ್ತೇಸರ ಜಿ. ಗೋಪಾಲಕೃಷ್ಣ ಉಪಾಧ್ಯಾಯರವರು ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ಕಾಮಗಾರಿ ಬಗ್ಗೆ ವಿವರ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಉಪ ಸಮಿತಿಗಳ ಜವಾಬ್ಧಾರಿ ಬಗ್ಗೆ ಚರ್ಚಿಸಿ ಜವಾಬ್ಧಾರಿಗಳನ್ನು ಹಂಚಲಾಯಿತು.
ಪ್ರತಿಷ್ಠಾ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ರಾಮಯ್ಯ ಗೌಡ ಮಾಚಾರು ಸ್ವಾಗತಿಸಿದರು. ಜೊತೆ ಕೋಶಾಧಿಕಾರಿ ಪ್ರಸಾದ್ ಎಕ್ಕಿನಬೆಟ್ಟು ವಂದಿಸಿದರು. ಸಮಿತಿಯ ಸದಸ್ಯರುಗಳು, ಉಪಸಮಿತಿಯ ಸಂಚಾಲಕರು, ಸದಸ್ಯರು, ಊರವರು ಹಾಜರಿದ್ದರು.