ಎಸ್ಸೆಸ್ಸೆಫ್ ರಾಜ್ಯ ಸಮಿತಿ ಅಧ್ಯಕ್ಷರಾಗಿ ಇಂದಬೆಟ್ಟು ಅಬ್ದುಲ್ ಲತೀಫ್ ಸಅದಿ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಂದಬೆಟ್ಟು: ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ 2021-22ನೇ ಸಾಲಿನ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶಿವಮೊಗ್ಗದ ಸಾಗರದಲ್ಲಿ ಜ.31ರಂದು ನಡೆಯಿತು. ಸುನ್ನಿ ಸ್ಟೂಡೆಂಟ್ ಫೆಡರೇಶನ್(ಎಸ್ಎಸ್ ಎಫ್) ನೂತನ ರಾಜ್ಯಾಧ್ಯಕ್ಷರಾಗಿ ಇಂದಬೆಟ್ಟು ಗ್ರಾಮದ  ಅಬ್ದುಲ್ ಲತೀಫ್ ಸಅದಿ ಆಯ್ಕೆಯಾಗಿದ್ದಾರೆ.

ಇಂದಬೆಟ್ಟು ನಿವಾಸಿ ಮರ್ಹೂಂ ಹಸೈನಾರ್ ರವರ ಪುತ್ರರಾಗಿರುವ ಅಬ್ದುಲ್ ಲತೀಫ್ ಸಅದಿ 2011ರಲ್ಲಿ ಸಅದಿ ಬಿರುದು ಪಡೆದಿದ್ದು, ಬೆಳ್ತಂಗಡಿಯಲ್ಲಿ ಸಂಘಟನಾ ರಂಗದಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಎರಡು ಬಾರಿ ಹೊಸನಗರ ಡಿವಿಷನ್ ಅಧ್ಯಕ್ಷರಾಗಿ, 2015-16ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿರುವ ಮರ್ಕಝ್ ಸಆದಃ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿಯಾಗಿ ಸುಫ್ಯಾನ್ ಸಖಾಫಿ ಕಾವಳಕಟ್ಟೆ ,ಕಾರ್ಯದರ್ಶಿಗಳಾಗಿ ಮುಸ್ತಫಾ ನಈಮಿ ಹಾವೇರಿ, ನೌಫಲ್ ಸಖಾಫಿ ಕಳಸ, ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು, ನವಾಝ್ ಭಟ್ಕಳ, ಶರೀಫ್ ಕೊಡಗು, NC ರಹೀಂ ಉಡುಪಿ, ಹಕೀಂ ಬೆಂಗಳೂರು, ಮುಬಶ್ಶಿರ್ ಅಹ್ಸನಿ ಕೊಡಗು, ವಾಜಿದ್ ಹಾಸನ ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಅಲವೀ ತಂಙಳ್ ಕರ್ಕಿ, ಅಝೀಝ್ ಸಖಾಫಿ ಕೊಡಗು, ಶಾಫಿ ಸಅದಿ ಬೆಂಗಳೂರು, ರವೂಫ್ ಖಾನ್ ಉಡುಪಿ, ಮುನೀರ್ ಸಖಾಫಿ ಉಳ್ಳಾಲ (ದ.ಕ ವೆಸ್ಟ್), ಆರಿಫ್ ಸಅದಿ ಉತ್ತರ ಕನ್ನಡ, ಖಾದರ್ ಪಾಶಾ ದಾವಣಗೆರೆ, ಮುಹಮ್ಮದ ಅಲಿ (ದ.ಕ ಈಸ್ಟ್), ಯಾಸೀನ್ ಸಖಾಫಿ ಹಾವೇರಿ, ಸಲೀಂ ಕೊಪ್ಪಳ, ಜುನೈದ್ ಸಖಾಫಿ ಚಿತ್ರದುರ್ಗ, ಮನ್ಸೂರ್ ಉಡುಪಿ, ಸುಹೈಲ್ ತುಮಕೂರು, ಶರೀಫ್ ಬೆರ್ಕಳ (ದ.ಕ ಈಸ್ಟ್), ಶರೀಫ್ ಮಿಸ್ಬಾಹಿ ಹಾಸನ,  ಸಯ್ಯಿದ್ ಖಾಲಿದ್ ಶಿವಮೊಗ್ಗ, ನೂರುದ್ದೀನ್ ಮುಜೀಬಿ ಬಳ್ಳಾರಿ ಆಯ್ಕೆಗೊಂಡಿದ್ದಾರೆ.

ಸಭೆಯಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಫಾರೂಕ್ ನಹೀಮಿ ಕೊಲ್ಲಂ, ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಜೆ.ಎಂ ಕಾಮಿಲ್ ಸಖಾಫಿ, ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ  ಸಹಿತ ಹಲವು ನಾಯಕರು, ಜಿಲ್ಲಾವಾರು ಪದಾಧಿಕಾರಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.