ಕುಕ್ಕೇಡಿ ಗ್ರಾಮದ ಉಮಿಲಾಯಿ ಡ್ಯಾಮ್ನಲ್ಲಿ ನಡೆದ ದುರ್ಘಟನೆ: ಪುರಿಯ ನಿವಾಸಿ ರವೀಂದ್ರ ನೀರಿನಲ್ಲಿ ಮುಳುಗಿ ಮೃತ್ಯು
ಮಾಲಾಡಿ: ಕುಕ್ಕೇಡಿ ಗ್ರಾಮದ ಉಮಿಲಾಯಿ ಡ್ಯಾಮ್ ಕೆಳಗಡೆ ಇರುವ ಗುಂಡಿಯಲ್ಲಿ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಫೆ.1ರಂದು ವರದಿಯಾಗಿದೆ.
ಮಾಲಾಡಿ ಗ್ರಾಮದ ಪುರಿಯ ನಿವಾಸಿ ರವೀಂದ್ರ (20.ವ) ಉಮಿಲಾಯಿ ಡ್ಯಾಮ್ ಕೆಳಗಡೆ ಇರುವ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ| ಕುಂಞ ಮತ್ತು ದಿ| ಗುಲಾಬಿ ದಂಪತಿ ಪುತ್ರರಾದ ರವೀಂದ್ರ ರವರು ಡ್ಯಾ ನೀರಿನಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕುಕ್ಕೇಡಿ ಗ್ರಾ.ಪಂ ಸದಸ್ಯ ಗೋಪಾಲಕೃಷ್ಣ ಶೆಟ್ಟಿ ಮತ್ತು ಸ್ಥಳೀಯರಾದ ಪುರಂದರ ಗಾಂದೊಟ್ಯ ಇವರ ಸಹಕಾರದಿಂದ ಮೃತಶರೀರವನ್ನು ನೀರಿನಿಂದ ಮೇಲೆತ್ತುವ ಕಾರ್ಯ ಮಾಡಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.