ಗ್ರಾ.ಪಂ ಚುನಾಯಿತ ಬಿಜೆಪಿ ಬೆಂಬಲಿತ ಸದಸ್ಯ ರಿಗೆ ಅಭಿನಂದನೆ- ಬಿಜೆಪಿ ಹಳ್ಳಿಗರ ಪಕ್ಷ: ಸಚಿವ ಈಶ್ವರಪ್ಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 46 ಗ್ರಾ. ಪಂ.ಗಳಲ್ಲಿ 40 ಗ್ರಾ. ಪಂ.ಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಹಳ್ಳಿಗರ ಪಕ್ಷ ಎಂಬುದನ್ನು ತೋರಿಸಿ ಕೊಟ್ಟಿದ್ದೀರಿ ಎಂದು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.


ಅವರು ಜ.೩೦ರಂದು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಯಭೇರಿ ಗಳಿಸಲು ಕಾರಣೀಕರ್ತರಾದ ಕಾರ್ಯಕರ್ತರಿಗೆ, ನೂತನವಾಗಿ ಚುನಾಯಿತರಾದ ಸದಸ್ಯರುಗಳಿಗೆ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.

ಗೋಹತ್ಯೆ ಮತ್ತು ಲವ್ ಜೆಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ಬಂದಿದ್ದು, ಈ ಕೃತ್ಯವನ್ನು ಮಾಡುವವರ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರ ನೀಡಿದರು.

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಾವು ಯಾರ ಜೊತೆ ಯೂ ತಾಂಟುವುದಿಲ್ಲ ,ನಾವು ರಾಷ್ಟ್ರಸ್ಕೋಸ್ಕರ ತಾಂಟುವವರು, ಗೋಹತ್ಯೆ ಮಾಡುವವರ ವಿರುದ್ಧ, ದೇಶ ವಿರೋಧಿಗಳ ವಿರುದ್ಧ, ಭಯೋತ್ಪಾದನೆ ಮಾಡುವವರನ್ನು ಹತ್ತಿಕ್ಕವ  ಕೆಲಸ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಗ್ರಾ.ಪಂ ಸದಸ್ಯರ ಗೌರವವನ್ನು 2 ಸಾವಿರಕ್ಕೆ ಏರಿಸಬೇಕೆಂದರು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗರ ಮಾತನಾಡಿ ಉತ್ತಮ ಕೆಲಸ ಮಾಡಿದವರನ್ನು ಪಕ್ಷ ಗುರುತಿಸುತ್ತದೆ ಎಂದರು.
ಭಾಜಪ ದ.ಕ ಜಿಲ್ಲಾ ಅಧ್ಯಕ್ಷ ಸುದಶ೯ನ್ ಮೂಡಬಿದ್ರೆ,
ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಪ್ರಭಾರ ಹರಿಕೃಷ್ಣ ಬಂಟ್ವಾಳ, ದ.ಕ ಜಿ.ಪಂ.ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು,
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ದನ, ಮಂಗಳೂರು ಪ್ರಭಾರ ಉದಯ ಶೆಟ್ಟಿ, ರಾಜೇಶ್ ಕಾವೇರಿ, ಜಿ.ಪಂ ಉಪಾಧ್ಯಕ್ಷ ಕಸ್ತೂರಿ ಪಂಜ, ಜಿ ಪಂ, ನ.ಪಂ, ಸದಸ್ಯರು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ವಹಿಸಿ, ಸ್ವಾಗತಿಸಿದರು.
ಶ್ರೀ ನಿವಾಸ ರಾವ್ ವಂದೇ ಮಾತರಂ ಹಾಡಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿ, ಸೀತಾರಾಮ್ ಬಿ.ಎಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.