ಶಿಶಿಲ: ಶಿಶಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಹೊಳಗುಂಡಿ ಹರೀಶ್ ಗೌಡ ರವರ ಮನೆಯಲ್ಲಿ ಜ.29 ರಂದು ನಡೆಯಿತು.
ಶಿಶಿಲ ಶಕ್ತಿಕೇಂದ್ರ ಪ್ರಮುಖ್ ಸೂರಜ್ ನೆಲ್ಲಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ಕರುಣಾಕರ, ಶಿಶಿಲ ಮಹಾಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ ಕಳೆಂಜ, ಶಿಶಿಲ ಬೂತ್ ಸಮಿತಿ ಅಧ್ಯಕ್ಷ ಜಗದೀಶ್ ಡಿ., ಶಿಶಿಲ ಗ್ರಾ.ಪಂ. ಸದಸ್ಯರುಗಳಾದ ಸುಧೀನ್ ಡಿ, ಸಂದೀಪ್ ಅಂಬುಡಂಗೆ, ಕಮಲಾಕ್ಷಿ, ಲಲಿತಾ, ಬಿಜೆಪಿ ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯರಾದ ವಿಮಲ ಸ್ವಾಗತಿಸಿ, ಕರುಣಾಕರ ಶಿಶಿಲ ಕಾರ್ಯಕ್ರಮ ನಿರೂಪಿಸಿ, ಯಶೋಧರ ಕೆ.ವಿ ಧನ್ಯವಾದವಿತ್ತರು.