ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ ಇದರ ವತಿಯಿಂದ ನವೋದಯ ಸ್ವಸಹಾಯ ಸಂಘಗಳಿಗೆ ಮಾಹಿತಿ ಕಾರ್ಯಕ್ರಮ, ಬ್ಯಾಗ್ ವಿತರಣೆ, ಹೊಸ ಸ್ವಸಹಾಯ ಸಂಘಗಳ ಉದ್ಘಾಟನೆ, ಚೈತನ್ಯ ವಿಮೆ ವಿತರಣಾ ಕಾರ್ಯಕ್ರಮವು ಸಂಘದ ವಠಾರದಲ್ಲಿ ಜ. 30ರಂದು ಜರುಗಿತು.
ಬೆಳ್ತಂಗಡಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ರಾಜು ಕೆ ಸಾಲಿಯಾನ್, ಸಂಘದ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್, ಉಡುಪಿ ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಹರಿನಾಥ, ಕಾರ್ಕಳ ಸ್ವಸಹಾಯ ಸಂಘಗಳ ಮೇಲ್ವಿಚಾರಕ ನಾರಾಯಣ, ಮಂಗಳೂರು ಸ್ವಸಹಾಯ ಸಂಘಗಳ ಮೇಲ್ವಿಚಾರಕ ರಂಜಿತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವೋದಯ ಸ್ವಸಹಾಯ ಸಂಘಗಳ ಸದಸ್ಯರು, ನವೋದಯ ಪ್ರೇರಕರು, ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.