ಪ್ರಾಕೃತಿಕ ವಿಕೋಪದಲ್ಲಿ ಸೂರು ಕಳೆದುಕೊಂಡ 6 ಕುಟುಂಬಗಳಿಗೆ ಮನೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮನೆ ನಿರ್ಮಾಣದ ಮೂಲಕ ಬಡವರ ಕಣ್ಣೀರು ಒರೆಸುವ ಕಾರ್ಯ : ಬಿಷಪ್ ಪೀಟರ್ ಮಚಾದೋ

ಬೆಳ್ತಂಗಡಿ: ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಸಹಕಾರದಿಂದ, ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ದ.ಕ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸ್ಥಳೀಯ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಹಾಗೂ ಫಲಾನುಭವಿಗಳ ಸಹಕಾರದಿಂದ ಪ್ರಾಕೃತಿಕ ವಿಕೋಪದ ಪರಿಣಾಮದಿಂದ ಸೂರು ಕಳೆದುಕೊಂಡ ಆರು ಕುಟುಂಬಗಳಿಗೆ ನೂತನವಾಗಿ ನಿರ್ಮಿಸಲಾದ 6 ಮನೆಗಳ ಹಸ್ತಾಂತರ ಕಾರ್ಯಕ್ರಮವು ಬೆಳ್ತಂಗಡಿ ಜ್ಞಾನನಿಲಯದಲ್ಲಿ ಜ.28ರಂದು ಜರುಗಿತು
ಬೆಂಗಳೂರಯ ಮಹಾ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಪೀಟರ್ ಮಜಾದೋ ರವರು ಮನೆಯ ಕೀಯನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ಕಳೆದ ಬಾರಿ ಸುರಿದ ಅತಿವೃಷ್ಟಿ ಹಾಗೂ ನೆರೆಯ ಪರಿಣಾಮದಿಂದ ಸೂರು ಕಳೆದುಕೊಂಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಪುಣ್ಯದ ಕಾರ್ಯದಲ್ಲಿ ತಾವೆಲ್ಲರೂ ಬಾಗಿಯಾಗಿದ್ದೀರಿ. ನಿಜಕ್ಕೂ ಇದೊಂದು ಭಗವಂತ ಮೆಚ್ಚುವ ಪುಣ್ಯದ ಕೆಲಸ ಎಂದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಬಿಷಪ್ ಲಾರೆನ್ಸ್ ಮುಕ್ಕುಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.ಕಾರಿತಾಸ್ ಇಂಡಿಯಾ ಸಂಸ್ಥೆಯ ಕರ್ನಾಟಕ ರಾಜ್ಯಾಧಿಕಾರಿ ರೋಬರ್ಟ್ ಡಿ’ಸೋಜಾ, ಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ವಂ.ಫಾ| ಜೋಸ್ ವಲಿಯಪರಂಬಿಲ್, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಉಪಾಧ್ಯಕ್ಷ ವಂ.ಫಾ.ತೋಮಸ್ ಕಣ್ಣಂಗಾಲ್, ಜ್ಞಾನನಿಲಯದ ನಿರ್ದೇಶಕ ವಂ.ಫಾ. ಜೋಸೆಫ್ ಮಟ್ಟಮ್, ಫ್ಯಾಮಿಲಿ ಅಪೋಸ್ತಲೇಟ್ ನಿರ್ದೇಶಕ ವಂ.ಫಾ| ತೋಮಸ್ ಪುದಿಯರ, ಜಾನ್ಸಲರ್ ಲಾರೆನ್ಸ್ ಪುನೋಳಿಲ್, ಬೆಂಗಳೂರಿನಿಂದ ಆಗಮಿಸಿದ ಡೀಕನ್ ಶಶಿಕಿರಣ್ ಹಾಗೂ ತಾಂತ್ರಿಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ವಂ. ಫಾ ಬಿನೋಯಿ ಎ.ಜೆ ಸ್ವಾಗತಿಸಿ, ಮನೆ ನಿರ್ಮಾಣದ ಸಂಕ್ಷಿಪ್ತ ವರದಿ ಮಂಡಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಸಿಸಿಲಿಯಾ ತಾವ್ರೋ ಮತ್ತು ಮಾರ್ಕ್ ಡಿ’ಸೋಜಾ ಪ್ರಾರ್ಥಿಸಿದರು. ಶುಭ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿ, ಸುನಿಲ್ ಗೊನ್ಸಾಲ್ವಿಸ್ ಧನ್ಯವಾದವಿತ್ತರು.
ಮನೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ ಆರ್ಚ್ ಬಿಷಪ್, ಬಿ.ಎಮ್.ಎಸ್.ಎಸ್.ಎಸ್ ಸಂಸ್ಥೆಯ ನಿರ್ದೇಶಕ ವಂ. ಜೋಸೆಫ್ ನವೀನ್ ಕುಮಾರ್, ವೈಯಕ್ತಿಕ ದಾನಿಯ ಪ್ರತಿನಿಧಿಯಾಗಿ ಆಗಮಿಸಿದ ವಂ. ಫಾ. ಬಾಲ ಫ್ರಾನ್ಸಿನ್, ಸಂತ ತೆರೇಸಾ ಕೋಲ್ಕೊತ್ತಾ ಚರ್ಚ್ ಭೂಪಸಂದ್ರ, ಮಹಾ ಧರ್ಮಪ್ರಾಂತ್ಯದ ಚರ್ಚ್‌ಗಳ ಪ್ರತಿನಿಧಿಯಾಗಿ ಆಗಮಿಸಿದ ವಂ. ಫಾ. ವಿನ್ಸೆಂಟ್ ಕಿರಣ್, ಧಾರ್ಮಿಕ ಸಭೆಯ ಪ್ರತಿನಿಧಿಯಾಗಿ ಆಗಮಿಸಿರುವ ವಂ.ಸಿ. ಅಶ್ವಿನಿ , ಕಾರಿತಾಸ್ ಇಂಡಿಯಾ ಸಂಸ್ಥೆಯ ಪರವಾಗಿ ರೋಬರ್ಟ್ ಡಿ’ಸೋಜಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಫಲಾನುಭವಿಗಳ ಪರವಾಗಿ ಸೌಮ್ಯರವರು ದಾನಿಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.