ಲಾಯಿಲ: ಲಾಯಿಲ ಗ್ರಾಮದ ರಾಘವೇಂದ್ರ ನಿವಾಸಿ, ಹರೀಶ್ ಸಪಲ್ಯ(52.ವ) ರವರು ಜ.28 ರಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರು ಲಾರಿ ಚಾಲಕರಾಗಿದ್ದು, ಪತ್ನಿ ಅಶ್ವಿನಿ, ಇಬ್ಬರು ಮಕ್ಕಳಾದ ಭುವನ, ಚೈತ್ರೇಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.