ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಅಯ್ಯಪ್ಪಗುಡಿ ಹತ್ತಿರ ನೂತನವಾಗಿ ಪ್ರಾರಂಭಿಸಿದ ಎನ್ ಆರ್ ಮೋಟಾರ್ಸ್ ಇದರ ಶುಭಾರಂಭವು ಜ.28 ರಂದು ಜರುಗಿತು.
ನೂತನ ಸಂಸ್ಥೆಯನ್ನು ಉಭಯ ಜಿಲ್ಲಾ ಜನ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ ವಸಂತ ಸಾಲಿಯಾನ್ ಕಾಪಿನಡ್ಕ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಕೋರಿದರು.
ಸಂಸ್ಥೆಯ ಮಾಲಕರಾದ ಶ್ರೀಮತಿ ರಶ್ಮಿ ಮತ್ತು ನಿತೇಶ್ ಕುಮಾರ್ ಜಿ ದಂಪತಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸಂಸ್ಥೆಯಲ್ಲಿ ಡಾಲ್ಫಿನ್ ಕಾರ್ ಸ್ಪಾ , ಬ್ಲೂ ಡಾಲ್ಫಿನ್ ಕಾರ್ ಎಸಿ ಮತ್ತು ಅಟೋ ಎಲೆಕ್ಟ್ರಿಕಲ್ ವರ್ಕ್ಸ್, ಎಲ್ಲಾ ಕಂಪೆನಿಯ ಕಾರ್ ಸರ್ವಿಸ್ ಮತ್ತು ರಿಪೇರಿ ಮಾಡಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವೇಣೂರು ತಾಲೂಕು ಕಾರ್ಯವಾಹಕ ಸಂತೋಷ್ ಕುಮಾರ್ ಕಾಪಿನಡ್ಕ, ಸಂಸ್ಥೆಯ ಮಾಲಕರ ಮಾತಾ-ಪಿತರಾದ ರತ್ನಾವತಿ ಮತ್ತು ಮುತ್ತಪ್ಪ ಪೂಜಾರಿ ದಂಪತಿ, ಸುದ್ದಿ ಬಿಡುಗಡೆಯ ಸಂತೊಷ್ ಪಿ ಕೋಟ್ಯಾನ್ ಬಳಂಜ, ಪುಷ್ಪಲತಾ- ವಿಶ್ವನಾಥ ಪೂಜಾರಿ ಡೆಚ್ಚಾರು, ಶ್ರುತಿ ಮತ್ತು ಸುಕೇಶ್ ಎಂ ಕಾಪಿನಡ್ಕ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್ ಎಸ್, ಮೇಲಂತಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ನಾರಾಯಣ ಪೂಜಾರಿ, ರಕ್ಷಿತ್ ವಿ ಪೂಜಾರಿ ಡೆಚ್ಚಾರು, ಹರಿಪ್ರಸಾದ್ ಪಿಲ್ಯ, ರಾಘವೇಂದ್ರ ಮೇಲಂತಬೆಟ್ಟು, ಪ್ರದೀಪ್ ಕುಮಾರ್, ದಿವಾಕರ ಕಾಪಿನಡ್ಕ, ಯೋಗೀಶ್ ಎಂ, ಸೀತಾರಾಮ, ವಸಂತ, ಪ್ರವೀಣ್ ಕಾಪಿನಡ್ಕ, ಕಮಲೇಶ್ ಉಂಗೀಲಬೈಲು ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು..