ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ-ಆಯ್ಕೆಗೆ ಕಸರತ್ತು: ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಬಿರುಸುಗೊಂಡ ಚಟುವಟಿಕೆ

ಬೆಳ್ತಂಗಡಿ: ಗ್ರಾಮ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಜ.27ರಂದು ಪುತ್ತೂರು ಪುರಭವನದಲ್ಲಿ ಮೀಸಲಾತಿಯನ್ನು ನಿಗದಿಪಡಿಸಲಾಗುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಗೊಂಡಿದೆ.

ಮೀಸಲಾತಿಯನ್ನು ರೊಸ್ಟರ್ ಪದ್ದತಿಯಂತೆ ಆಯ್ಕೆ ಮಾಡಿದ್ದರಿಂದ ಅನೇಕ ಮಂದಿ ಆಕಾಂಕ್ಷಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ತಮಗೆ ಮೀಸಲಾತಿ ಅನುಕೂಲವಾಗಬಹುದೆಂಬ ಲೆಕ್ಕಾಚಾರ ಹಾಕಿಕೊಂಡಿದ್ದರೂ ಅದು ಯಶಸ್ವಿಯಾಗಿಲ್ಲ, ನಿರೀಕ್ಷಿತ ಮೀಸಲಾತಿ ಬಾರದಿರುವುದರಿಂದ ಆನೇಕರಿಗೆ ನಿರಾಸೆಯಾಗಿದೆ. ತಮಗೆ ಅವಕಾಶ ದೊರೆಯಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡವರು ಈಗ ಮೌನವಾಗಿದ್ದಾರೆ. ಬಂದ ಮೀಸಲಾತಿಗೆ ಅನುಗುಣವಾಗಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಬೆಂಬಲಿತ ಸದಸ್ಯರ ನಡುವೆ ಚಟುವಟಿಕೆಗಳು ಚುರುಕುಗೊಂಡಿದೆ.

ಕೆಲವೊಂದು ಪಂಚಾಯತುಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಸದಸ್ಯರೊಳಗೆ ಪೈಪೋಟಿ ಆರಂಭಗೊಂಡಿದ್ದು, ತಾಲೂಕು ವರಿಷ್ಠ ಮೇಲೆ ಒತ್ತಡವನ್ನು ತರುವ ಪ್ರಯತ್ನಗಳು ನಡೆಯಲಿದೆ. ಎರಡೂವರೆ ವರ್ಷಗಳ ಅವಧಿಯ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗಾದಿಗೆ ಆಯ್ಕೆ ಕಸರತ್ತು ಈಗಾಗಲೇ ಬಿರುಸುಗೊಂಡಿದೆ.
ಸಂಭಾವ್ಯ ಅಭ್ಯರ್ಥಿಗಳು

ನಡ ಗ್ರಾಮ ಪಂಚಾಯತು: ನಡ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿದ್ದು, ಸದಸ್ಯರಾದ ಎ. ವಿಜಯ ಗೌಡ, ಜಯಶೆಟ್ಟಿ, ಚಂದ್ರಹಾಸ ಗೌಡ ಸೇರಿದಂತೆ ಎಲ್ಲರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ’ಗೆ ಮೀಸಲಾಗಿದ್ದು, ವಿನುತ ಶೆಟ್ಟಿ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

ಇಂದಬೆಟ್ಟು ಗ್ರಾಮ ಪಂಚಾಯತು: ಇಂದಬೆಟ್ಟು ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯರಿಗೆ ನಿಗದಿಯಾಗಿದ್ದು, ಸದಸ್ಯರಾದ ಆನಂದ, ಶ್ರೀಕಾಂತ್, ಪ್ರತೀಕ್, ಸತೀಶ್ ಸೇರಿದಂತೆ ಎಲ್ಲರಿಗೂ ಅವಕಾಶವಿದೆ. ಉಪಾಧ್ಯಕ್ಷ ಹಿಂದುಳಿದ ವರ್ಗ ಎ ಮಹಿಳೆಗೆ ಬಂದಿದ್ದು, ಆಶಾಲತಾ, ಶ್ರೀಮತಿ ಜಯಂತಿ ನಾಗೇಶ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಮಚ್ಚಿನ ಗ್ರಾಮ ಪಂಚಾಯತು: ಮಚ್ಚಿನ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಿರಿಸಲಾಗಿದ್ದು, ಚುನಾಯಿತರಾದ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ಇದೆ. ಈ ಪಂಚಾಯತದಲ್ಲಿ ಉಪಾಧ್ಯಕ್ಷ ಗಾದಿಯ ಮೀಸಲಾತಿ ಸಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಚುನಾಯಿತರಾದ ಎಲ್ಲಾ ಮಹಿಳಾ ಸದಸ್ಯರಿಗೆ ಸ್ಪರ್ಧಿಸುವ ಅವಕಾಶವಿದೆ.

ಕೊಕ್ಕಡ ಗ್ರಾಮ ಪಂಚಾಯತು: ಕೊಕ್ಕಡ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ’ಗೆ ನೀಡಲಾಗಿದ್ದು, ಸದಸ್ಯರಾದ ಯೋಗೀಶ್ ಅಲಂಬಿಲ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಪವಿತ್ರ, ಲತಾ ಮತ್ತು ವನಿತಾ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಪಟ್ರಮೆ ಗ್ರಾಮ ಪಂಚಾಯತು: ಪಟ್ರಮೆ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ನಿಗದಿಯಾಗಿದ್ದು, ಮೋಹಿನಿಯವರು ಏಕೈಕ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿದ್ದು, ಸದಸ್ಯರಾದ ಮನೋಜ್, ಯತೀಶ್, ರಾಜೇಶ್ ರೈ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದು, ಇತರ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಇದೆ.

ನಿಡ್ಲೆ ಗ್ರಾಮ ಪಂಚಾಯತು: ನಿಡ್ಲೆ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನಿಗದಿಯಾಗಿದ್ದು, ಸದಸ್ಯರಾದ ರುಕ್ಮಯ್ಯ ಪೂಜಾರಿ, ಪ್ರವೀಣ್ ಹೆಬ್ಬಾರ್, ಮೋಹನ ಪೂಜಾರಿ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಇತರರಿಗೂ ಸ್ಪರ್ಧೆಗೆ ಅವಕಾಶ ಇದೆ. ಉಪಾಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ನೀಡಲಾಗಿದ್ದು, ಸದಸ್ಯರಾದ ಶ್ಯಾಮಲಾ, ಶೈಲಜಾ, ಗಿರಿಜ ಇವರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಶಿಶಿಲ ಗ್ರಾಮ ಪಂಚಾಯತು: ಶಿಶಿಲ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನಿಗದಿಯಾಗಿದ್ದು, ಸದಸ್ಯರಾದ ಸುಧೀನ್, ಸಂದೀಪ್,ಯತೀಶ್ ಭಟ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದು, ಇತರರಿಗೂ ಸ್ಪರ್ಧಿಸಬಹುದಾಗಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ ಮಹಿಳೆಗೆ ನಿಗದಿಯಾಗಿದ್ದು, ವಿಮಲ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ.

ಶಿಬಾಜೆ ಗ್ರಾಮ ಪಂಚಾಯತು: ಶಿಬಾಜೆ ಗ್ರಾಮ ಪಂಚಾಯತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಗಳು ಸಾಮಾನ್ಯರಿಗೆ ನಿಗದಿಯಾಗಿದೆ. ಇದರಿಂದಾಗಿ ಈ ಎರಡು ಸ್ಥಾನಗಳಿಗೆ ಪಂಚಾಯತದ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ನಿರ್ಮಾಣವಾಗಿದೆ.

ಅರಸಿನಮಕ್ಕಿ ಗ್ರಾಮ ಪಂಚಾಯತು: ಅರಸಿನಮಕ್ಕಿ ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯರಿಗೆ ನಿಗದಿಯಾಗಿದ್ದು, ಸದಸ್ಯರಾದ ಸುಧೀರ್ ಕುಮಾರ್, ನವೀನ್ ಸೇರಿದಂತೆ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ಇದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾಗಿದ್ದು, ಶಕುಂತಲಾ ಆಚಾರ್ಯ ಮತ್ತು ಲಾವಣ್ಯ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

ನಾವೂರು ಗ್ರಾಮ ಪಂಚಾಯತು: ನಾವೂರು ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯರಿಗೆ ಮೀಸಲಾಗಿದ್ದು, ಸದಸ್ಯರಾದ ಹರೀಶ್ ಸಾಲ್ಯಾನ್, ಗಣೇಶ್ ಗೌಡ, ಬಾಲಕೃಷ್ಣ ಸೇರಿದಂತೆ ಎಲ್ಲರಿಗೂ ಸ್ಪರ್ಧಿಸಲು ಅವಕಾಶ ಇದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿದ್ದು, ಸದಸ್ಯೆ ಸುನಂದ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ.

ಕಳೆಂಜ ಗ್ರಾಮ ಪಂಚಾಯತು: ಕಳೆಂಜ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ಗೆ ನಿಗದಿಯಾಗಿದ್ದು, ಸದಸ್ಯರಾದ ಗಂಗಾಧರ ಭಂಡಾರಿ, ಪ್ರಸನ್ನ ಎ.ಪಿ, ಗಣೇಶ್ ಕುಂದರ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿದ್ದು, ಗಿರಿಜ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ.

ಕುಕ್ಕೇಡಿ ಗ್ರಾಮ ಪಂಚಾಯತು: ಕುಕ್ಕೇಡಿ ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಹಿಂದುಳಿದ ವರ್ಗ ಎ’ಗೆ ನಿಗದಿಯಾಗಿದ್ದು, ಸದಸ್ಯರಾದ ಜನಾರ್ದನ ಪೂಜಾರಿ, ಧನಂಜಯ ಕುಲಾಲ್, ದಿನೇಶ್ ಮೂಲ್ಯ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಸದಸ್ಯೆ ಗೀತಾ ನಿಟ್ಟಡೆ ಏಕೈಕ ಅಭ್ಯರ್ಥಿಯಾಗಿದ್ದಾರೆ.

ಕೊಯ್ಯೂರು ಗ್ರಾಮ ಪಂಚಾಯತು: ಕೊಯ್ಯೂರು ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸದಸ್ಯ ಜಗನ್ನಾಥ್ ಏಕೈಕ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ಗೆ ನಿಗದಿಯಾಗಿದ್ದು, ಸದಸ್ಯೆ ಸುಮಿತಾ ಏಕೈಕ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

ಬೆಳಾಲು ಗ್ರಾಮ ಪಂಚಾಯತು: ಬೆಳಾಲು ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾಗಿದ್ದು, ಸದಸ್ಯರಾದ ಜಯಂತಿ ಮತ್ತು ಗೀತಾ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ನೀಡಲಾಗಿದ್ದು ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ಇದೆ.

ಉಜಿರೆ ಗ್ರಾಮ ಪಂಚಾಯತು: ಉಜಿರೆ ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಪುಷ್ಪವತಿ ಆರ್.ಶೆಟ್ಟಿ, ಮಂಜುಳಾ, ಉಷಾಕಿರಣ್, ಶಶಿಕಲಾ, ನಾಗವೇಣಿ ಸೇರಿದಂತೆ ಎಲ್ಲಾ ಮಹಿಳಾ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ಇದೆ. ಉಪಾಧ್ಯಕ್ಷ ಹಿಂದುಳಿದ ವರ್ಗ ಎ’ಗೆ ನೀಡಲಾಗಿದ್ದು, ಸದಸ್ಯರಾದ ರವಿಕುಮಾರ್ ಬರೆಮೇಲು, ಗುರುಪ್ರಸಾದ್ ಕೋಟ್ಯಾನ್, ನಾಗೇಶ್ ರಾವ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಹೊಸಂಗಡಿ ಗ್ರಾಮ ಪಂಚಾಯತು : ಹೊಸಂಗಡಿ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನೀಡಲಾಗಿದ್ದು, ಸದಸ್ಯರಾದ ಕರುಣಾಕರ್, ಜಗದೀಶ್ ಹೆಗ್ಡೆ, ಪ್ರಕಾಶ್ ಸೇರಿದಂತೆ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶವಿದೆ. ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ನೀಡಲಾಗಿದ್ದು, ನಾಗರತ್ನ, ಶಾಂತ ಸೇರಿದಂತೆ ಎಲ್ಲಾ ಮಹಿಳಾ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ಇದೆ.

ಧರ್ಮಸ್ಥಳ ಗ್ರಾಮ ಪಂಚಾಯತು : ಧರ್ಮಸ್ಥಳ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಸದಸ್ಯರಾದ ಸುನಿತಾ, ಶರ್ಮಿಳಾ, ವಸಂತಿ ಸೇರಿದಂತೆ ಚುನಾಯಿತ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶ ಇದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನೀಡಲಾಗಿದ್ದು, ಸದಸ್ಯರಾದ ಶ್ರೀನಿವಾಸ ರಾವ್, ಸುಧಾಕರ, ರವಿಕುಮಾರ್, ದಿನೇಶ್ ರಾವ್, ಹರ್ಷಿತ್ ಜೈನ್ ಸೇರಿದಂತೆ ಎಲ್ಲಾ ಸದರಿಗೆ ಸ್ಪರ್ಧಿಸಲು ಅವಕಾಶ ಇದೆ.

ಮಿತ್ತಬಾಗಿಲು ಗ್ರಾಮ ಪಂಚಾಯತು: ಮಿತ್ತಬಾಗಿಲು ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ ಮಹಿಳೆಗೆ ನಿಗದಿಯಾಗಿದ್ದು, ಸದಸ್ಯರಾದ ಲತಾ ಹರೀಶ್ ಮತ್ತು ವಿಜಯಲಕ್ಷ್ಮೀ ಉಮೇಶ್ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನೀಡಲಾಗಿದ್ದು, ವಿನಯಚಂದ್ರ, ರಾಮಣ್ಣ ಸೇರಿದಂತೆ ಎಲ್ಲಾ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ಇದೆ.

ಮುಂಡಾಜೆ ಗ್ರಾಮ ಪಂಚಾಯತು: ಮುಂಡಾಜೆ ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿದ್ದು, ಸದಸ್ಯೆ ರಂಜನಿ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ನೀಡಲಾಗಿದ್ದು, ಜ್ಯೋತಿ ಯಾನೆ ದಿಶ ಪಟವರ್ಧನ್, ಸುಮಲತಾ, ವಿಮಲ ಸೇರಿದಂತೆ ಚುನಾಯಿತ ಮಹಿಳಾ ಸದಸ್ಯರಿಗೆ ಅವಕಾಶ ಇದೆ.

ನೆರಿಯ ಗ್ರಾಮ ಪಂಚಾಯತು: ನೆರಿಯ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ನಿಗದಿಯಾಗಿದ್ದು, ಸದಸ್ಯೆ ವಸಂತಿ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ಗೆ ನೀಡಲಾಗಿದ್ದು, ಸದಸ್ಯರಾದ ಕುಶಲ, ಸುಜಾತ, ದಿನೇಶ್ ಮೊದಲಾದವರಿಗೆ ಅವಕಾಶ ಇದೆ.

ಕಡಿರುದ್ಯಾವರ ಗ್ರಾಮ ಪಂಚಾಯತು: ಕಡಿರುದ್ಯಾವರ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ ನಿಗದಿಯಾಗಿದ್ದು, ಸದಸ್ಯರಾದ ಅಶೋಕ್ ಕುಮಾರ್, ಗುರುಪ್ರಸಾದ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯವರಿಗೆ ನಿಗದಿಯಾಗಿದ್ದು, ಸದಸ್ಯೆ ಬೇಬಿಯವರು ಏಕೈಕ ಅಭ್ಯರ್ಥಿಯಾಗಿದ್ದಾರೆ.

ಕಲ್ಮಂಜ ಗ್ರಾಮ ಪಂಚಾಯತು: ಕಲ್ಮಂಜ ಗ್ರಾಮ ಪಂಚಾಯತದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನೀಡಲಾಗಿದ್ದು ಸದಸ್ಯರಾದ ವಿಷ್ಟುಮೂರ್ತಿ ಹೆಬ್ಬಾರ್, ವರದಾಕ್ಷ ಆಚಾರ್, ಶ್ರೀಧರ ಎಂ., ಪ್ರವೀಣ್‌ಗೌಡ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ವಿಮಲ, ಶೋಭಾವತಿ ಸೇರಿದಂತೆ ಚುನಾಯಿತ ಮಹಿಳಾ ಸದಸ್ಯರಿಗೆ ಅವಕಾಶ ಇದೆ.

ಪುದುವೆಟ್ಟು ಗ್ರಾಮ ಪಂಚಾಯತು: ಪುದುವೆಟ್ಟು ಗ್ರಾಮ ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯರಿಗೆ ನಿಗದಿಯಾಗಿದ್ದು, ಅಧ್ಯಕ್ಷ ಗಾದಿಗೆ ಸದಸ್ಯರಾದ ರಾಮೇಂದ್ರ, ಯಶವಂತ ಗೌಡ, ಭಾಸ್ಕರ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ಮಹಿಳೆಗೆ ನಿಗದಿಯಾಗಿದ್ದು, ಸದಸ್ಯರಾದ ರೇಣುಕಾ ಏಕೈಕ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

ಬಳಂಜ ಗ್ರಾಮ ಪಂಚಾಯತ್ : ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಬಾಲಕೃಷ್ಣ ಪೂಜಾರಿ, ಯಶೋಧರ ಶೆಟ್ಟಿ, ಹೇಮಂತ್, ಶೋಭಾ ಕುಲಾಲ್ ಅವರಿಗೆ ಅವಕಾಶವಿದೆ.ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಮಹಿಳೆ ಬೇಬಿ ನಾರಾಯಣ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.

ಶಿರ್ಲಾಲು ಗ್ರಾಮ ಪಂಚಾಯತ್: ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ತಾರನಾಥ ಗೌಡ, ಪ್ರಕಾಶ್ ಹೆಗ್ಡೆ, ಸೋಮನಾಥ ಬಂಗೇರ, ಮಾಧವ ಅವರಿಗೆ ಅವಕಾಶವಿದೆ.ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡ ಮಹಿಳೆ ಗೀತಾ ಯಾನೆ ಶಾರದಾ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಪಡಂಗಡಿ ಗ್ರಾಮ ಪಂಚಾಯತ್ : ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಾಗಿದ್ದು ಆಯ್ಕೆಯಾದ ಎಲ್ಲ ಮಹಿಳಾ ಸದಸ್ಯರಿಗೆ ಅವಕಾಶವಿದೆ.

ಮೇಲಂತಬೆಟ್ಟು ಗ್ರಾಮ ಪಂಚಾಯತು: ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ ಮುಂದಿನ ೩೦ ತಿಂಗಳ ಅವಧಿಗೆ ಪರಿಷಿಷ್ಟ ಜಾತಿ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದು ಹರಿಣಾಕ್ಷಿಯವರು ಸಂಭವಿಯ ಅಭ್ಯರ್ಥಿಯಾಗಿರುತ್ತಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು ಮೀಸಲಾತಿಯಿಂದ ಆಯ್ಕೆಯಾದ ದೀಪಿಕಾ, ಯೋಗಿತಾ, ಸವಿತಾ ಸಂಭವಿಯ ಅಭ್ಯರ್ಥಿಯಾಗಿರುತ್ತಾರೆ.

ಲಾಯಿಲ ಗ್ರಾಮ ಪಂಚಾಯತು: ಲಾಯಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಗಣೇಶ್, ಹರಿಕೃಷ್ಣ, ಮಹೇಶ್, ಹರೀಶ್ ಸಂಭವಿಯ ಅಭ್ಯರ್ಥಿಯಾಗಿರುತ್ತಾರೆ.

ಕಳಿಯ ಗ್ರಾಮ ಪಂಚಾಯತು: ಕಳಿಯ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಗೆ ಮೀಸಲಾಗಿದ್ದು ಮೀಸಲಾತಿಯಿಂದ ಆಯ್ಕೆಯಾದ ಸುಭಾಷಿಣಿ, ಇಂದಿರಾ ಸಂಭವಿಯ ಅಭ್ಯರ್ಥಿಯಾಗಿರುತ್ತಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೆ ಅವಕಾಶವಿದೆ.

ಕಣಿಯೂರು ಗ್ರಾಮ ಪಂಚಾಯತ್: ಕಣಿಯೂರು ಗ್ರಾಮ ಪಂಚಾಯತ್ ನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದು ಮೀಸಲಾತಿಯಿಂದ ಆಯ್ಕೆಯಾದ ಯಶೋದ, ಗಾಯತ್ರಿ, ಸುಮತಿ, ಪ್ರಿಯಾಂಕ ಇವರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮೀಸಲಾಗಿದ್ದು ಸುನೀಲ್ ಸಾಲಿಯಾನ್, ಯಶವಂತ, ಅಜಿತ್ ಕುಮಾರ್ ಇವರುಗಳಿಗೆ ಅವಕಾಶವಿದೆ.

ಬಂದಾರು ಗ್ರಾಮ ಪಂಚಾಯತು: ಬಂದಾರು ಗ್ರಾಮ ಪಂಚಯತು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಗಂಗಾಧರ ಪೂಜಾರಿಯವರು ಏಕೈಕ ಅಭ್ಯರ್ಥಿಯಾಗಿದ್ದಾರೆ.

ಇಳಂತಿಲ ಗ್ರಾಮ ಪಂಚಾಯತು: ಇಳಂತಿಲ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಇ ಪಂಚಾಯಿತಿನಿಂದ ಆಯ್ಕೆಯಾದ ಎಲ್ಲಾ ಸದಸ್ಯರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಎಲ್ಲಾ ಸದಸ್ಯರಿಗೂ ಅವಕಾಶವಿದೆ.

ತಣ್ಣೀರುಪಂತ ಗ್ರಾಮ ಪಂಚಾಯತು: ತಣ್ಣೀರುಪಂತ ಗ್ರಾಮ ಪಂಚಾಯತು ನಲ್ಲಿ ಅಧ್ಯಕ್ಷ ಸ್ಥಾನ ಸಾಮನ್ಯ ಮಹಿಳೆಯಾಗಿದ್ದು ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರು ಭಾಗವಹಿಸಬಹುದು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಯಾಗಿದ್ದು ಇಲ್ಲಿ ಆಯ್ಕೆಯಾದ ಜಯವಿಕ್ರಮ್, ಆಯುಬು, ಶಾಜುದ್ಧೀನ್, ಆಶ್ರಫ್ ಇನ್ನಿತರರಿಗೆ ಅವಕಾಶವಿದೆ.

ಬಾರ್ಯ ಗ್ರಾಮ ಪಂಚಾಯತು: ಬಾರ್ಯ ಗ್ರಾಮ ಪಂಚಾಯತು ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾಗಿದ್ದು ಇ ಪಂಚಾಯಿತಿನಿಂದ ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರು ಭಾಗವಹಿಸಬಹುದು. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಆಯ್ಕೆಯಾದ ಎಲ್ಲಾ ಸದಸ್ಯರು ಸ್ಪರ್ಧಿಸಬಹುದು.

ತೆಕ್ಕಾರು ಗ್ರಾಮ ಪಂಚಾಯತು: ತೆಕ್ಕಾರು ಗ್ರಾಮ ಪಂಚಾಯತು ನಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಅಬ್ದುಲ್ ರಝಾಕ್ ಸಂಭವ್ಯ ಅಭ್ಯಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರು ಭಾಗವಹಿಸಬಹುದು.

ಅಂಡಿಜೆ ಗ್ರಾಮ ಪಂಚಾಯತ್: ಅಂಡಿಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶವಿದೆ.

ಅಳದಂಗಡಿ ಗ್ರಾಮ ಪಂಚಾಯತು: ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಯವರಿಗೆ ಅವಕಾಶವಿದೆ.

ಮಾಲಾಡಿ ಗ್ರಾಮ ಪಂಚಾಯತು: ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮನ್ಯ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ೮ ಮಹಿಳಾ ಸದಸ್ಯರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವಾಗಿದ್ದು ಇಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೂ ಅವಕಾಶವಿದೆ.

ನಾರಾವಿ ಗ್ರಾಮ ಪಂಚಾಯತ್: ನಾರಾವಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಎಲ್ಲಾ ಸದಸದ್ಯರಿಗೂ ಸ್ಪರ್ಧಿಸಲು ಅವಕಾಶವಿದೆ.

ಮರೋಡಿ ಗ್ರಾಮ ಪಂಚಾಯತು: ಮರೋಡಿ ಗ್ರಾಮ ಪಮಚಾಯತ್ ನ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸದಸ್ಯರಿಗೂ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶವಿದೆ.

ಕಾಶಿಪಟ್ಣ ಗ್ರಾಮ ಪಂಚಾಯತು:ಕಾಶಿಪಠ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಶಾಂಭವಿ, ಶಿಲ್ಪ ಇವರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಆಯಕೆಯಾದ ಎಲ್ಲಾ ಸದಸ್ಯರಿಗೂ ಅವಕಾಶವಿದೆ.

ಕುವೆಟ್ಟು ಗ್ರಾಮ ಪಂಚಾಯತು: ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಯಾಗಿದ್ದು ಇಲ್ಲಿ ಆಯ್ಕೆಯಾದ ಶಾಲಿನಿ, ಉಷಾ, ಆಶಾಲತಾ, ವಿಜಯಲಕ್ಷ್ಮೀ ಇವರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಇಲ್ಲಿ ಆಯೆಯಾದ ಎಲ್ಲಾ ಸದಸ್ಯರು ಸ್ಪರ್ಧಿಸಬಹುದು.

ಮಡಂತ್ಯಾರು ಗ್ರಾಮ ಪಂಚಾಯತ್: ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಗಂಡ ವರ್ಗಕ್ಕೆ ಈ ಕ್ಷೇತ್ರದಿಂದ ಆಯ್ಕೆಯಾದ ಶಶಿಪ್ರಭಾ ಸಂಭವ್ಯ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಯಾಗಿದ್ದು ಸಂಗೀತ ಶೆಟ್ಟಿ, ಆಗ್ನೇಸ್ ಮೋನಿಸ್, ಶೀಲಾ ಯುವರಾಜ್ ಇವರುಗಳಿಗೆ ಸ್ಪರ್ಧಿಸಲು ಅವಕಾಶವಿದೆ.

ಸುಲ್ಕೇರಿ ಗ್ರಾಮ ಪಂಚಾಯತು: ಸುಲ್ಕೇರಿ ಗ್ರಾಮ ಪಂಚಾಯತು ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಯಾಗಿದ್ದು ಇಲ್ಲಿ ಆಯ್ಕೆಯಾದ ರವಿಪೂಜಾರಿ, ನಾರಾಯಣ, ಶುಭಕರ,ಇವರಿಗೆ ಅವಕಶವಿದೆ.ಉಪಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಾಗಿದ್ದು ಎಲ್ಲಾರಿಗೂ ಸ್ಪರ್ಧಿಸಲು ಅವಕಶವಿದೆ.

ಚಾರ್ಮಾಡಿ ಗ್ರಾಮ ಪಂಚಾಯತು: ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಆಗಿದ್ದು ಇಲಿ ಆಯ್ಕಯಾದ ಸದಾಶಿವ, ಕೆ.ವಿ ಪ್ರಸಾದ್, ಅವಿನಾಶ್ ಇವರುಗಳಿಗೆ ಸ್ಪರ್ಧಿಸಲು ಅವಕಾಶವಿದೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಶಾರದಾ ಎ,ರೂಪ, ಮೇರಿ ,ಮಂಜುಳಾ ಸುರೇಖಾ ಹಾಗೂ ಆಯ್ಕೇಯಾದ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಬಹುದು.

ಮಲವಂತಿಗೆ ಗ್ರಾಮ ಪಂಚಾಯತು: ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಗಂಡ ಮಹಿಳೆ ಅನಿತಾ ಕೆ ಸಂಭವ್ಯ ಅಭ್ಯರ್ಥಿಯಾಗಿದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಪ್ರಕಾಶ್ ಕುಮಾರ್ ಜೈನ್ ,ಡಿ.ದಿನೇಶ್ ಗೌಡ ಯವರಿಗೆ ಅವಕಾಶವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.