ಪಡಂಗಡಿ:ಗರ್ಡಾಡಿ ಗ್ರಾಮದ ಡೆಂಜೋಳಿ ದೇವಸ್ಥಾನದ ಮುಂಭಾಗದಲ್ಲಿ ರೂ. 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಡೆಂಜೋಳಿ ದೇವಸ್ಥಾನದ ಆಡಳಿತ ಮೊಕ್ತೇಸರರು ಶ್ರೀ ಡಿ.ಉದಯ ಮಂಜಿತ್ತಾಯ, ಶಕ್ತಿ ಕೇಂದ್ರದ ಪ್ರಮುಖರಾದ ರಾಜೇಶ್ ಅರ್ಚಾಯ, ವಿಶ್ವನಾಥ ಹೊಳ್ಳ, ಜಯರಾಮ್ ಶೆಟ್ಟಿ, ಸುಂದರ ಪೂಜಾರಿ, ಶ್ರೀನಿವಾಸ್ ಶೆಟ್ಟಿ, ಗರ್ಡಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಯೋಗಿಶ್ ಭಟ್, ಶುಭ ದಿನಕರ್, ಪ್ರಶಾಂತ್ ಪೂಜಾರಿ, ಹರೀಶ್ ಕೋಟ್ಯಾನ್, ಅಶೋಕ್ ಸಪಲ್ಯ, ಸುಮತಿ ಪೂಜಾರಿ ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದರು