ಮೇಲಂತಬೆಟ್ಟು: ಇಲ್ಲಿಯ ಗೋಳಿದಪಲ್ಕೆ ನಿವಾಸಿ ಡೀಕಯ್ಯ ಪೂಜಾರಿಯವರ ಪುತ್ರಿ ರಕ್ಷಿತಾ( 17.ವ) ರವರು ಜ.27 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಹಲವು ದಿನಗಳಿಂದ ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಡ ಕುಟುಂಬದವರಾಗಿದ್ದ ಇವರಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಸಹಾಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಲಾಗಿದ್ದು, ಹಲವು ದಾನಿಗಳಿಂದ ಧನಸಹಾಯ ಸಂಗ್ರಹಿಸಲಾಗಿತ್ತು. ಖಾಯಿಲೆ ತೀವ್ರ ಉಲ್ಬಣಗೊಂಡಿದ್ದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಜ.27 ರಂದು ಕೊನೆಯುಸಿರೆಳೆದಿದ್ದಾರೆ.
ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಇವರು ತಂದೆ ಡೀಕಯ್ಯ ಪೂಜಾರಿ, ತಾಯಿ ಹರಿಣಿ ಹಾಗೂ ಬಂಧುವರ್ಗವರನ್ನು ಅಗಲಿದ್ದಾರೆ.