ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಶಾಸಕ ಹರೀಶ್ ಪೂಂಜರಿಂದ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮರೋಡಿ: ತಾಳಿಪಾಡಿ ಪಲಾರಗೋಳಿಯಲ್ಲಿ ಅನಾದಿ ಕಾಲದಿಂದಲೂ ಆರಾಧನೆ ಮಾಡಿಕೊಂಡು ಬರುತ್ತಿರುವ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಮಂಚ ಪ್ರತಿಷ್ಠಾಪನೆ, ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವವನ್ನು ಬ್ರಹ್ಮಶ್ರೀ ಉದಯ ಪಾಂಗಣ್ಣಯ ಮತ್ತು ವೇದಮೂರ್ತಿ ಶ್ರೀ ಕೆ. ಅನಂತ ಅಸ್ರಣ್ಣ ನೇತೃತ್ವದಲ್ಲಿ ಫೆ.15ರಿಂದ ಫೆ.18ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿ ಶುಭಕೋರಿದರು.

ಚಪ್ಪರ ಮೂಹೂರ್ತವನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ನೆರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಕೆ. ಅನಂತ ಅಸ್ರಣ್ಣ, ಕಲಶಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಅಧ್ಯಕ್ಷ ರತ್ನಾಕರ ಬುಣ್ಣನ್, ಜಿರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಮಿರಾಜ ಪಾಂಡಿ, ಅಧ್ಯಕ್ಷ ರಾಮ್ ಪ್ರಸಾದ್, ಹಿರಿಯರಾದ ಪಿ.ಕೆ ರಾಜು ಪೂಜಾರಿ, ಜಾತ್ರಾ ಸಮಿತಿ ಅಧ್ಯಕ್ಷ ದಾಮೋದರ ಪೂಜಾರಿ, ಅರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಕಿರಣ್ ಬೆಂಗಳೂರು, ನಿವೃತ್ತ ಮುಖ್ಯೋಪಾಧ್ಯಾಯ ವೆಂಕಟರಾವ್, ಕಲಶಾಭಿಷೇಕ ಕಾರ್ಯದರ್ಶಿ ಶಿವಾನಂದ ಆಚಾರ್ಯ ಯೋಜನೆಯ ಮೇಲ್ವಿಚಾರಕಾ ಗಿರೀಶ್, ಜಾತ್ರಾ ಸಮಿತಿ ಕಾರ್ಯದರ್ಶಿ ಉಮೇಶ್ ಸಾಲಿಯಾನ್, ಕಲಶಾಭಿಷೇಕ ಸಮಿತಿ ಪ್ರ. ಕಾರ್ಯದರ್ಶಿ ಶಿವಾನಂದ ಆಚಾರ್ಯ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.