ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತುಗಳ ಅಧ್ಯಕ್ಷ-ಉಪಾಧ್ಯಕ್ಷ ಮಿಸಲಾತಿ ನಿಗದಿ ಪ್ರಕ್ರಿಯೆ ಜ.27ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಮೀಸಲಾತಿಯಲ್ಲಿ ನಿಗದಿಪಡಿಸುವ ಕಾರ್ಯ ವಿವಿಧ ಸ್ಥಳಗಳಲ್ಲಿ ಜ.18ರಿಂದ ಆರಂಭಗೊಂಡಿದ್ದು, ಜ.28ರ ತನಕ ನಡೆಯಲಿದೆ.

ಡಿ.27ರಂದು ಬೆಳ್ತಂಗಡಿ ತಾಲೂಕಿನಲ್ಲಿ 46 ಗ್ರಾಮ ಪಂಚಾಯತುಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿದ್ದು, ಡಿ.30ರಂದು ಮತ ಎಣಿಕೆ ನಡೆಸಲಾಗಿತ್ತು. ಈಗಾಗಲೇ ಸರಕಾರ ತಾಲೂಕಿನಲ್ಲಿ ಯಾವ, ಯಾವ, ವರ್ಗದ ಎಷ್ಟೆಷ್ಟು ಮಂದಿ ಅಧ್ಯಕ್ಷ-ಉಪಾಧ್ಯಕ್ಷರಾಗಬೇಕು ಎಂದು ಸಂಖ್ಯೆ ನಿಗದಿ ಪಡಿಸಿ, ರಾಜ್ಯ ಪತ್ರದಲ್ಲಿ  ಪ್ರಕಟಿಸಿದೆ. ಇದೀಗ ಯಾವ ಪಂಚಾಯತದಲ್ಲಿ ಯಾವ ವರ್ಗದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎಂಬುದನ್ನು ನಿಗದಿ ಪಡಿಸುವ ಕಾರ್ಯ ನಡೆಯಿತು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತುಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿವರ ಈ ಕೆಳಗಿನಂತಿದೆ.


About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.