ನಾಳ: ಕಳೆದ ಹಲವಾರು ವರ್ಷಗಳಿಂದ ಮಡಂತ್ಯಾರು ಚರ್ಚ್ಗೆ ಒಳಪಟ್ಟ ಸುಮಾರು 34 ಕುಟುಂಬಗಳು ನಾಳ, ಮಾವಿನಕಟ್ಟೆಯಲ್ಲಿ ನೆಲೆಸಿದ್ದವು. ಇಲ್ಲಿಯ ಕುಟುಂಬಗಳಿಗೆ ತಮ್ಮ ಧಾರ್ಮಿಕ ಹಾಗೂ ಆದ್ಯಾತ್ಮಿಕ ಸೇವೆಗೆ ದಕ್ಕೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ 9 ವರ್ಷಗಳ ಹಿಂದೆ ಸ್ವತಂತ್ರ ಚರ್ಚ್ ಆಗಿ ಮಾರ್ಪಟ್ಟು ಇಲ್ಲಿ ನೂತನ ಚರ್ಚ್ ಕಟ್ಟಡದ ಕಟ್ಟಡ ಕಟ್ಟುವಲ್ಲಿ ಇಲ್ಲಿಯ ಕುಟುಂಬಗಳು ಒಟ್ಟು ಸೇರಿ ರೂ.1 ಕೋಟಿ ವೆಚ್ಚದಲ್ಲಿ ಆರ್ಥಿಕ ನೆರವು ಸಂಗ್ರಹಿಸಿ, ಸರಕಾರದ, ಊರವರ ಭಕ್ತಾದಿಗಳ ನೆರವಿನಿಂದ ನೂತನ ಚರ್ಚ್ ಕಟ್ಟಡ ತಲೆಎತ್ತಿ ನಿಂತಿದೆ. ಈ ಚರ್ಚ್ನ ಉದ್ಘಾಟನೆಯು ಇಂದು ಲೋಕಾರ್ಪಣೆಗೊಂಡಿದೆ.
ಇದರ ಉದ್ಘಾಟನೆ ಮತ್ತು ಆಶೀರ್ವಾಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ| ಫೀಟರ್ ಪೌಲ್ ಸಲ್ಡಾನ್ಹ ನೆರವೇರಿಸಿದ್ದರು. ಎಸ್.ವಿ.ಡಿ ಧರ್ಮಗುರುಗಳು ಮುಂಬಯಿ ಪ್ರೊವಿನ್ಸ್ಯಲ್ ವಂ.ಫಾ| ರಿಚ್ಚರ್ಡ್ ಮಾಥಾಯಸ್, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ| ಲಾರೆನ್ಸ್ ಮುಕ್ಕುಯಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ| ಗೀವರ್ಗಿಸ್ ಮಾರ್ಕ್, ಮೊಕಾರಿಯೇಸ್, ಬೆಳ್ತಂಗಡಿ ತಾಲೂಕು ವಿಕಾರ್ವಾರ್ ವಂ. ಫಾ| ಜೊಸೇಫ್ ಕರ್ಡೊಜ, ಮಡಂತ್ಯಾರು ಚರ್ಚ್ನ ಧರ್ಮಗುರು ವಂ.ಫಾ| ಬೆಸಿಲ್ ವಾಸ್, ಆಸ್ಕರ್ ಫೆರ್ನಾಂಡಿಸ್, ಶಾಸಕ ಹರೀಶ್ ಪೂಂಜ, ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಎಂ.ಎಲ್.ಸಿ ಹರೀಶ್ ಕುಮಾರ್, ಡಿವೈಎಸ್ಪಿ ವೆಲೆಂಟಿನ್ ಡಿಸೋಜ, ಬಂಟ್ವಾಳ ಆರ್.ಟಿಒ ಜಾನ್ ಮಿಸ್ಕಿತ್ ಲಾಲ, ಉದ್ಯಮಿ ವಿಜಯ ಸಿಕ್ವೇರಾ, ಜಿಲ್ಲಾ ಪಂಚಾಯತ್ ಸದಸ್ಯ ಸಾಹುಲ್ ಹಮಿದ್, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಅಮಿತಾ ಕುಶಲಪ್ಪ ಗೌಡ, ಕಣಿಯೂರು, ಪದ್ಮುಂಜ ಗ್ರಾ.ಪಂ., ಕಳಿಯ ಗೇರುಕಟ್ಟೆ ಗ್ರಾ.ಪಂ ಅಧ್ಯಕ್ಷರು, ವಂ.ಫಾ| ರಿಚ್ಚರ್ಡ್ ಡಿ ಅಲ್ಮೇಡಾ, ಎಸ್ವಿಡಿ, ವಂ. ಫಾ| ವಾಲ್ಟರ್ ಮೆಂಡೋನ್ಸಾ, 11:30 ಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಚರ್ಚ್ ಧರ್ಮಗುರು ವಂ.ಫಾ| ತೋಮಸ್ ಸಿಕ್ವೇರಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫೆಡ್ರಿಕ್ ಡಿಕೋಸ್ತಾ, ಕಾರ್ಯದರ್ಶಿ ಶ್ರೀಮತಿ ಸಿಂತಿಯಾ ಫೆರ್ನಾಂಡಿಸ್, ಸಂಯೋಜಕ ಗ್ರೇಗರಿ ಡೇಸಾ, ಚರ್ಚ್ ಉದ್ಘಾಟನಾ ಸಮಾರಂಭ ಸಂಯೋಜಕರು ವಿನ್ಸೆಂಟ್ ರೇಗೊ ಮತ್ತು ನವೀನ್ ಡೇಸಾ ತಾಲೂಕಿನ ಎಲ್ಲಾ ಚರ್ಚ್ನ ಧರ್ಮಗುರುಗಳು, ಧರ್ಮ ಭಗಿನಿಯರು, ತಾಲೂಕಿನ ಎಲ್ಲಾ ಚರ್ಚ್ನ ಭಕ್ತಾದಿಗಳು ಇದೀಗ ನಡೆಯುವ ಬಲಿ ಪೂಜೆಯಲ್ಲಿ ಪಾಲ್ಗೊಳುವರು.