ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಉಜಿರೆಯ ವಯೋವೃದ್ಧ, ಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಬಾಬು ದಾಸ್ ರವರಿಗೆ ಇಂಡಿಯನ್ ಸೀನಿಯರ್ ಛೇಂಬರ್ನಿಂದ ಗಾಲಿ ಕುರ್ಚಿಯನ್ನು 72 ನೇ ವರ್ಷದ ಗಣರಾಜ್ಯೋತ್ಸವದ ದಿನದಂದು ಅಧ್ಯಕ್ಷ ವಿಶ್ವನಾಥ ಶೆಟ್ಟಿಯವರು ಅವರ ಮನೆಗೆ ತೆರಳಿ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ನ ರಾಷ್ಟ್ರೀಯ ನಿರ್ದೇಶಕ ಪ್ರಮೋದ್ ಆರ್ ನಾಯಕ್, ಕಾರ್ಯದರ್ಶಿ ರಾಜಾರಾಮ್ ಗಜಂತ್ತೋಡಿ, ಸದಸ್ಯರಾದ ಅಶೋಕ್ ಕುಮಾರ್ ಬಿ.ವಿ, ಭಾನು ಪ್ರಸನ್ನ, ಯಶವಂತ್ ಪಟವರ್ಧನ್, ಭರತ್ ಕುಮಾರ್, ಗ್ರಾಮ ಪಂಚಾಯತಿನ ವಿಪುಲ್ ಉಪಸ್ಥಿತರಿದ್ದರು