ಪಡಂಗಡಿ: ಇಲ್ಲಿಯ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಸರಳವಾಗಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.3 ರಂದು ಜರುಗಲಿದೆ.
ಫೆ.2 ರಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹವಾಚನ, ಉಗ್ರಾಣ ಮುಹೂರ್ತ, ಗಣಯಾಗ ಶತರುದ್ರಾಭಿಷೇಕ ಜರಗಿತು. ಸಂಜೆ ಹೊರೆಕಾಣಿಕೆ ಸಮರ್ಪಣೆ, ವಾಸ್ತುಬಲಿ, ರಾಕ್ಷೆಘ್ನ ಸುದರ್ಶನ ಹೋಮ, ದುರ್ಗಾ ಪೂಜೆ ನಡೆಯಲಿದೆ.
ಫೆ.3 ರಂದು ಬೆಳಿಗ್ಗೆ ಕಲಶ ಪ್ರಧಾನ ಹೋಮ, ಪಂಚವಿಂಶತಿ ಕಲಶಾಭಿಷೇಕ, ಶ್ರೀ ನಾಗದೇವರ ತಂಬಿಲ, ರುದ್ರಹೋಮ, ಮಹಾಪೂಜೆ, ಧ್ವಜಾರೋಹಣ, ದೇವರಬಲಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ರಂಗಪೂಜೆ, ದೈವಗಳಿಗೆ ಪರ್ವ, ತಂತ್ರ ಬಲಿ, ದೇವರ ನೃತ್ಯ ಬಲಿ ಉತ್ಸವ, ಬಟ್ಟಲು ಕಾಣಿಕೆ, ಗಂಧಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ವಸಂತ ಕಟ್ಟೆ ಪೂಜೆಯ ಬಳಿಕ ಧ್ವಜಾವರೋಹಣ ನಡೆಯಲಿದೆ. ಫೆ.4 ರಂದು ಬೆಳಿಗೆ ಸಂಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ ಜರುಗಲಿರುವುದು.