ಓಡಿಲ್ನಾಳ: ಇಲ್ಲಿಯ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥಮಂಟಪದ ಶಿಲಾನ್ಯಾಸ ಸಮಾರಂಭವು ಆಲಂಬಾಡಿ ಪದ್ಮನಾಭ ತಂತ್ರಿ ನೀಲೇಶ್ವರ ರವರ ನೇತೃತ್ವದಲ್ಲಿ ಜ.28 ರಂದು ಜರುಗಲಿದೆ.
ಮಾಜಿ ಶಾಸಕ ಕೆ ವಸಂತ ಬಂಗೇರ ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಉದ್ಯಮಿ ಹಾಗೂ ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಉಪಸ್ಥಿತರಿದ್ದು, ಶಿಲಾನ್ಯಾಸ ನೆರವೇರಿಸಲಿದ್ದಾರೆ
ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ವೃಷಭ ಆರಿಗ, ಕಾರ್ಯಾಧ್ಯಕ್ಷ ಜಯರಾಮ್ ಎಸ್ ಶೆಟ್ಟಿ, ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕೇದೆ, ಪವಿತ್ರಪಾಣಿ ಮೋಹನ ಕೆರ್ಮುಣ್ಣಾಯ, ಮತ್ತಿತರ ಗಣ್ಯರು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಬೈಲು ಸಮಿತಿ ಸರ್ವಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.