ಬಳಂಜ: ಉಜಿರೆಯಲ್ಲಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ನಡೆದ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಧಿಮಿಸೋಲೆ ಬಳಂಜ ತಂಡವು ಪ್ರಥಮ ಸ್ಥಾನ ಪಡೆಯಿತು.
ವಿಜೇತ ತಂಡಕ್ಕೆ ಉದ್ಯಮಿ ಶಶಿಧರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಪ್ರಶಸ್ತಿ ವಿತರಿಸಿದರು.
ತಂಡದಲ್ಲಿ ಸದಾಶಿವ ಶೆಟ್ಟಿ, ಯಶೋಧರ ಶೆಟ್ಟಿ, ಸಚಿನ್ ಶೆಟ್ಟಿ ಸಾರಥ್ಯದಲ್ಲಿ ಆಟಗಾರರಾದ ಭಾಸ್ಕರ ಶೆಟ್ಟಿ, ಚೇತನ್ ಶೆಟ್ಟಿ, ವಿಘ್ನೇಶ್, ಸೌರವ್, ಅಭಿ, ಯೋಗೀಶ್, ರೀತೇಶ್, ಪ್ರಣಾಮ್, ಲೋಹಿತ್, ವಿಘ್ಘೇಶ್, ಪ್ರಕಾಶ್, ಗಗನ್ ಉಪಸ್ಥಿತರಿದ್ದರು.