ಪಾರೆಂಕಿ: ಇಲ್ಲಿಯ ಬಂಗೇರಕಟ್ಟ ನಿವಾಸಿ, ನಿವೃತ್ತ ಶಿಕ್ಷಕಿ ಆನಂದಿ ಟೀಚರ್ (78.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಜ.25 ರಂದು ನಿಧನರಾದರು.
ಇವರು ಮಚ್ಚಿನ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಸುಮಾರು 25 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕೊಡುಗೈದಾನಿಯಾಗಿದ್ದ ಇವರು ಬಳ್ಳಮಂಜ ಮತ್ತು ಮಡಂತ್ಯಾರು ಮಹಿಳಾ ಮಂಡಲಗಳ ಅಧ್ಯಕ್ಷೆಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಓರ್ವ ಪುತ್ರಿ, ಐವರು ಪುತ್ರರು, ಬಂಧು ವರ್ಗದವರು ಹಾಗೂ ಶಿಷ್ಯ ವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು, ಶಿಷ್ಯವರ್ಗದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.