ಉಜಿರೆ: ಇಲ್ಲಿಯ ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಬಿ.ಎಂ. ಹಮೀದ್ ಮತ್ತು ಖತೀಬ ಅಬೂ ಸ್ವಾಲಿಹ್ ಕಾಮಿಲ್ ಸಖಾಫಿ ದ್ವಜಾರೋಹಣ ನೆರವೇರಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಯು.ಕೆ. ಮುಹಮ್ಮದ್ ಹನೀಫ್, ಉಜಿರೆ ಜಮಾತ್ ಕಾರ್ಯದರ್ಶಿ ಮುಹಮ್ಮದ್ ಕೆ.ಎಸ್.ಆರ್.ಟಿ.ಸಿ., ಕೋಶಾಧಿಕಾರಿ ಇಬ್ರಾಹಿಂ ವಾಫಿರ್, ರಿಯಾದ್ ಸಮಿತಿ ಉಪಾಧ್ಯಕ್ಷ ಉಬೈದುಲ್ಲಾ, ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿದ್ದೀಕ್ ವಾಫಿರ್, ಜಮಾತ್ನ ಸದಸ್ಯರುಗಳು, ಊರ ನಾಗರಿಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಸ್ವಾಗತಿಸಿ, ಕೋಶಾಧಿಕಾರಿ ಫಝಲ್ ರೆಹಮಾನ್ ಕೋಯ ಧನ್ಯವಾದವಿತ್ತರು.