ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್ಎಫ್ಸಿ ವಿಶೇಷ ಅನುದಾನದಿಂದ ಕೆಆರ್ಐಡಿಎಲ್ ನಿರ್ಮಾಣ ಸಂಸ್ಥೆ ಅನುಷ್ಠಾನ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ರೂ 4.05 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಜ.26 ರಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರಾದ ತುಳಸಿ, ಅಂಬರೀಷ್, ಲೋಕೇಶ್, ಗೌರಿ, ಶರತ್ ಕುಮಾರ್, ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ಕೇಶವ, ಜೂನಿಯರ್ ಕಾಲೇಜು ಉಪನ್ಯಾಸಕ ಸುಕುಮಾರ್ ಜೈನ್ ಹಾಗೂ ಉಪನ್ಯಾಸಕ ವೃಂದ, ಸ್ಥಳೀಯರಾದ ರಾಜೇಶ್ ಪೈ, ಅಶೋಕ್ ಶೆಟ್ಟಿ, ರಾಜಾರಾಮ್ ಗಜಂತ್ತೋಡಿ, ಕೆಆರ್ಡಿಪಿಎಲ್ ಇಂಜಿನಿಯರ್ ಪ್ರದೀಪ್, ಕಾಂಟ್ರಾಕ್ಟರ್ ಶಾಫಿ ಸಿಬ್ಬಂದಿಗಳು, ನಗರ ಪಂಚಾಯತ್ನ ಇಂಜಿನಿಯರ್ ಮಹಾವೀರ ಆರಿಗ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟ್ರಮಣ ಶರ್ಮ, ಹರೀಶ್ ಕುಮಾರ್ ಜೈನ್, ಬೂತ್ ಅಧ್ಯಕ್ಷ ರಾಜೇಶ್, ಮಹೇಶ್, ವಿಶ್ವನಾಥ ಮೂಲ್ಯ, ಆನಂದ ಗೌಡ ಉಜಿರೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.