ನದಿಯಲ್ಲಿ ಸ್ನಾನ ಮಾಡುತ್ತಿದ್ದವರ ಮೇಲೆ
ಗುಡ್ಡ ಕುಸಿತ: ನಾಲ್ವರಲ್ಲಿ ಓರ್ವ ನಾಪತ್ತೆ
ಮಲವಂತಿಗೆ: ಇಲ್ಲಿಯ ಎಳನೀರು ಬಂಗಾರಬಳಿಗೆ ಎಂಬಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ನಾಲ್ಕು ಮಂದಿ ಯುವಕರ ಮೇಲೆ ನದಿ ಬದಿಯ ಗುಡ್ಡ ಕುಸಿದು ಬಿದ್ದ ಪರಿಣಾಮ ಸ್ಥಾನ ಮಾಡುತ್ತಿದ್ದ ಓರ್ವ ನಾಪತ್ತೆಯಾಗಿರುವ ಘಟನೆ ಜ.೨೫ರಂದು ಸಂಭವಿಸಿದೆ.
ಉಜಿರೆ ಪರಿಸರದ ನಾಲ್ಕು ಮಂದಿ ಯುವಕರು ಒಟ್ಟು ಸೇರಿ ಬಂಗಾರಬಳಿಗೆ ಸಮೀಪದ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಸ್ನಾನ ಮಾಡುತ್ತಿರುವ ಸಮಯ ನದಿ ಬದಿಯ ಗುಡ್ಡ ಏಕಾಏಕಿ ಕುಸಿತಕ್ಕೊಳಗಾಗಿದ್ದು, ಸ್ಥಾನ ಮಾಡುತ್ತಿದ್ದ ನಾಲ್ವರಲ್ಲಿ ಮೂರು ಮಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ. ಈಗ ಉಜಿರೆಯ ನಿವಾಸಿ ಯುವಕ ನಾಪತ್ತೆಯಾಗಿದ್ದು, ಈಗ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಠಾಣೆಯ ಪೊಲೀಸರು, ಸ್ಥಳೀಯ ಗ್ರಾಮಕರಣಿಕರು, ಗ್ರಾ.ಪಂ ಸದಸ್ಯರು ತೆರಳಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.