ಬಳಂಜ: ಭಾರತ ಸರಕಾರದ ವತಿಯಿಂದ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುವ ಕುರಿತು ಸ್ವಾಮಿತ್ವ ಯೋಜನೆಯಡಿ ವಿಶೇಷ ಗ್ರಾಮ ಸಭೆಯು ಬಳಂಜ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಬೆಳ್ತಂಗಡಿ ಸರ್ವೆಯರ್ ಗುರುನಾಥ್, ರಾಮಚ್ಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವಿ, ಕಾರ್ಯದರ್ಶಿ ಪ್ರಿಯಾ ಡಿ ಹೆಗ್ಡೆ , ಗ್ರಾಮ ಕರಣೀಕ ಸಂತೋಷ್ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಯಶೋಧರ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಹೇಮಂತ್, ಜಯ ಶೆಟ್ಟಿ, ರವೀಂದ್ರ ಬಿ ಅಮೀನ್, ಸುಚಿತ್ರಾ ಕೆ, ಲೀಲಾವತಿ, ಶೋಭಾ ಕುಲಾಲ್, ಯಕ್ಷಿತಾ, ಪದ್ಮಾವತಿ, ನಿಜಾಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ.ಜಾತಿ ಪ.ಪಂಗಡ ಅರ್ಹ ಫಲಾನುಬಾವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಾ ಚೇತನರಿಗೆ ಚಯರ್ ವಿತರಣೆ ನಡೆಯಿತು. ಜ 25
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರತಿಜ್ಞ್ನಾ ವಿಧಿಯನ್ನು ಗ್ರಾಮ ಕರಣಿಕ ಸಂತೋಷ್ ಬೋಧಿಸಿದರು.