ಬೆಳಾಲು: ಬೆಳಾಲು ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಮಾಯಾ ಮಹಾದೇವ ದೇವಸ್ಥಾನದ ವತಿಯಿಂದ ಇತ್ತೀಚೆಗೆ ಸಂಸ್ಕಾರ ಶಿಬಿರ ಆರಂಭವಾಗಿದ್ದು, ಈ ಶಿಬಿರದ ಪಠ್ಯ ಪುಸ್ತಕ ‘ಸಂಸ್ಕಾರ’ದ ಅನಾವರಣ ಕಾರ್ಯಕ್ರಮ ಜರಗಿತು.
ಭಜನಾ ಮಂಡಳಿಯ ಅಧ್ಯಕ ಕೃಷ್ಣಪ್ಪ ಗೌಡ ಬೆರ್ಕೆಜಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ದಾನಿಗಳಾದ ಶೇಖರ್ ಗೌಡ ಕೊಲ್ಲಿಮಾರ್ ರವರು ಕೃತಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಕೃತಿಯ ಸಂಪಾದಕ ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್ ಬಾರಿತ್ತಾಯ ಪಾರಳ, ಜನಾರ್ದನ ಪೂಜಾರಿ ಪಿಲತ್ತಡಿ, ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು, ಮಾಯಾ ಫ್ರೆಂಡ್ಸ್ನ ಅಧ್ಯಕ್ಷ ರಾಧಾಕೃಷ್ಣ ಮಾಯಾ, ಭಜನಾ ಮಂಡಳಿ ಗೌರವಾಧ್ಯಕ್ಷ ವಸಂತ ಮೊದಲಾದವರು ಉಪಸ್ಥಿತರಿದ್ದರು.
ಬಹಳ ವಿಶಿಷ್ಟ ರೀತಿಯಲ್ಲಿ ರಚಿಸಲ್ಪಟ್ಟ ಈ ಕೃತಿಯಲ್ಲಿ ಹದಿನೈದು ದಿನಗಳ ಪರ್ಯಂತ ಜರಗಲಿರುವ ಶಿಬಿರ ವಿಷಯಗಳ ಪೂರ್ಣ ವಿವರ ಒಳಗೊಂಡಿದೆ.