ಉಜಿರೆ : ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಕೊಯ್ಯೂರು , ಶೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಕೊಯ್ಯೂರು ಹಾಗೂ ಶ್ರೀ ಪಂಚದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೊಯ್ಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜಬ್ಬಾರ್ ಸಮೋ ಅರ್ಥ ಸರಣಿ “ಯಕ್ಷಗಾನ ತಾಳಮದ್ದಳೆ ಪಂಚಾಹ 2021 ” ಜರುಗಿತು.
ದೇವಸ್ಥಾನ ದ ಮೊಕ್ತೇಸರ ಕೆ.ಬಿ.ಹರಿಶ್ಚಂದ್ರ ಬಲ್ಲಾಳ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಶೋಕ್ ಕುಮಾರ್ ಕೊಯ್ಯೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಪ್ರಚಂಡಭಾನು ಪಾಂಬೇಲು ಕೊಯ್ಯೂರು, ಪ್ರಾ ಕೃ .ಪ .ಸಹಕಾರಿ ಸಂಘದ ನಿರ್ದೇಶಕ ರವೀಂದ್ರನಾಥ ಪೆರ್ಮುದೆ, ಗ್ರಾ.ಪಂ. ಸದಸ್ಯ ಲೋಕೇಶ್ ಪಾಂಬೇಲು , ಬೆಳ್ತಂಗಡಿ ಚಿಕಿತ್ಸಾ ಫಾರ್ಮಾ ಮಾಲಕ ಶ್ರೀಶ ಮುಚ್ಚಿನ್ನಾಯ, ಅರ್ಥದಾರಿ ಜಬ್ಬಾರ್ ಸಮೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂರ್ಣೇಶ್ ಪ್ರಾರ್ಥಿಸಿ, ರಾಮಕೃಷ್ಣ ಭಟ್ ಬಳಂಜ ಸ್ವಾಗತಿಸಿ , ಉಮೇಶ್ ಆಚಾರ್ಯ ವಂದಿಸಿದರು . ವಿಜಯ ಕುಮಾರ್ ಎಂ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿ, ಬಾಸಮೆ ನಾರಾಯಣ ಭಟ್ ಸಹಕರಿಸಿದರು.” ಭಾರ್ಗವ ವಿಜಯ ” ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು .