ವೇಣೂರು: ಇತಿಹಾಸ ಪ್ರಸಿದ್ಧ ಅಜಿಲ ಸೀಮೆಗೆ ಒಳಪಟ್ಟ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಇದರ ಸಮಾಲೋಚನಾ ಸಭೆಯು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಅಜಿಲ ಸೀಮೆಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಶ್ರೀ ದೇವರ ಗರ್ಭಗೇಹದ ದ್ವಾರ ಪ್ರತಿಷ್ಠೆಯ ಬಗ್ಗೆ, ರುದ್ರಯಾಗ ಹಾಗೂ ಮತ್ತಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪಿ. ಧರಣೇಂದ್ರ ಕುಮಾರ್, ಪುರುಷೋತ್ತಮ ರಾವ್, ಸೋಮಯ್ಯ ಹನೈನಡೆ, ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಕೋಶಾಧಿಕಾರಿ ಎ. ಜಯರಾಮ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ಯಜ್ಞನಾರಾಯಣ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.