ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಧ್ವಜಾರೋಹಣ ಜ.24 ರಂದು ತಂತ್ರಿಗಳಾದ ಬ್ರಹ್ಮ ಶ್ರೀ ಬಾಲಕೃಷ್ಣ ಪಾಂಗಾಣ್ಣಾಯ ರವರ ಮಾರ್ಗದರ್ಶನದಲ್ಲಿ ವ್ಯಾಸ ಪಾಂಗಾಣ್ಣಾಯ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ|ಮೂ| ರಾಘವೇಂದ್ರ ಅಸ್ರಣ್ಣ ಮೂಲಕ ವೈದಿಕ ವಿಧಿ ವಿಧಾನಗಳ ಮೂಲಕ ವಿಜ್ರಂಬನೆ ಜರುಗಿತು.
ನ್ಯಾಯತರ್ಫು, ಕಳಿಯ ಮತ್ತು ಓಡಿಲ್ನಾಳ ಭಕ್ತಾಧಿಗಳಿಂದ ಬೃಹತ್ ಪ್ರಮಾಣದ ಹೊರೆ ಕಾಣಿಕೆ ಸಮರ್ಪಣೆ :
ನಾಳ ಜಾತ್ರಾ ಮಹೋತ್ಸವಕ್ಕೆ ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಹಸಿರು ಹೊರೆ ಕಾಣಿಕೆಯನ್ನು ಬ್ಯಾಂಡ್ ವಾದ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ,ದಿನೇಶ್ ಗೌಡ, ಅಂಬಾ ಆಳ್ವ, ವಿಜಯ ಹೆಚ್.ಪ್ರಸಾದ್, ಉಮೇಶ್ ಕೇಲ್ದಡ್ಕ, ರಾಜೇಶ್ ಅಡ್ಡ ಕೊಡಂಗೆ,ನಿಕಟ ಪೂರ್ವ ಅಧ್ಯಕ್ಷ ವಸಂತ ಮಜಲು ಅಭಿವೃದ್ಧಿ ಸಮಿತಿ ಪ್ರದಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಪ್ರಬಂಧಕ ಗಿರೀಶ್ ಶೆಟ್ಟಿ, ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ,ಮಹಿಳಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ನಾಳ, ಜಾತ್ರಾ ಮಹೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು,ನ್ಯಾಯತರ್ಪು, ಕಳಿಯ, ಓಡಿಲ್ನಾಳ ಮತ್ತು ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಧ್ಯಾಹ್ನ ಪಲ್ಲ ಪೂಜೆ ಹಾಗೂ ಸಾಂತಪ್ಪ ಶೆಟ್ಟಿ,ಶ್ರೀಮತಿ ಶಾಲಿನಿ ಮತ್ತು ಮಕ್ಕಳು ಮಠ ಇವರಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.