ಉಜಿರೆಯ ಹೋಟೆಲ್ ಒಂದರಲ್ಲಿ ಸಪ್ಲೈ ಮಾಡುತ್ತಿರುವ ಯುವಕನ ವಿಷಯದಲ್ಲಿಎರಡು ಗುಂಪಿನವರ ನಡುವೆ ಹೊಯ್ ಕೈ ನಡೆದು ಉಜಿರೆಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಹಾಗೂ ಪೊಲೀಸರುಸಕಾಲದಲ್ಲಿ ಕಾರ್ಯಚರಣೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದ ಘಟನೆ ಜನವರಿ 23 ರಂದು ರಾತ್ರಿ ನಡೆದಿದೆ. ಉಜಿರೆಯ ಎಂಪೈರ್ ಹೋಟೆಲ್ನಲ್ಲಿ ಜ್ಯೂಸ್ ಮೇಕರ್ ಆಗಿ ಕೆಲಸ ಮಾಡುತ್ತಿರುವ ಸುಧೆ ಮುಗೇರು ನಿವಾಸಿ ಮಹಮದ್ ಅಲ್ತಪ್ ನನ್ನು ವಾರದ ಹಿಂದೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ ರನ್ನ ಲಾಗಿದ್ದು ಯಾಕೆ ಗುರಾಯಿಸಿತ್ತಿದ್ದಿರಿ ಎಂದು ಕೇಳಿದಾಗ ಒಬ್ಬಾತ ತಾಂಟ್ ರೇ ಬಾ ತಾಂಟ್ ಎಂದು ಹೇಳಿದಾರೆನ್ನಾಲಾಗಿದೆ.
ಜ. 23 ರಂದು ಹೋಟೆಲಿನಿಂದ ಪಾರ್ಸಲ್ ಕೊಟ್ಟು ಬರುವಾಗ ಇಲ್ಲಿಯ ದ್ವಾರದಲ್ಲಿ ಆತನನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಬಿಡಿಸಲು ಬಂದ ಸಹೋದರರಿಗೂ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಉಜಿರೆ ಪೇಟೆಯಲ್ಲಿ ಎರಡು ಕಡೆಯವರು ಜಮಾಯಿಸಿ ಪರಿಸ್ಥಿತಿ ಉದ್ವಿಗ್ನ ಸ್ಥಿತಿ ತಲುಪುವ ಹಂತದಲ್ಲಿದ್ದಾಗ ಬೆಳ್ತಂಗಡಿ ಎಸ್.ಐ ನಂದಕುಮಾರ ಹಾಗೂ ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು