ಉಜಿರೆ: ಇಲ್ಲಿಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಶ್ರೀ ದುರ್ಗಾ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಪ್ರಾರಂಭಗೊಂಡಿರುವ ಹೊಸ ಗಿಫ್ಟ್ ಸ್ಕೀಮ್ನ ಪ್ರಥಮ ಡ್ರಾ ಜ.22 ರಂದು ಮಳಿಗೆಯಲ್ಲಿ ನಡೆಯಿತು.
ಉಜಿರೆಯ ಹಿರಿಯ ಉದ್ಯಮಿ ಕೆ. ಸುಬ್ರಾಯ ಶೆಣೈ ವಿಜೇತರ ಕೂಪನ್ ತೆಗೆಯುವ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಿದರು. ವಿಜೇತರಾಗಿ ಹರೀಶ್ ಚಾವಡಿ ಮುಂಡತ್ತೋಡಿ ಮತ್ತು ಚೈತ್ರಾ ಗಣೇಶ್ ಗೌಡ ಕೇಳ್ತಾಜೆ ಯವರಿಗೆ ಬಹುಮಾನ ಲಭಿಸಿತು.
ಉಜಿರೆ ಶ್ರೀ ಧ.ಮಂ ಕಾಲೇಜಿನ ಉಪನ್ಯಾಸಕ ಕರುಣಾಕರ್, ಮಂಗಳೂರಿನ ರಂಗ ಐತಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಯು. ಸದಾಶಿವ ಶೆಟ್ಟಿ, ಯು. ರಮೇಶ್ ಶೆಟ್ಟಿ, ಯು. ಉಮೇಶ್ ಶೆಟ್ಟಿ, ಸುನಂದಾ ಎಸ್ ಶೆಟ್ಟಿ, ಜಯಲತಾ ಆರ್ ಶೆಟ್ಟಿ, ಸವಿತಾ ಯು ಶೆಟ್ಟಿ, ಸುಧಾಮ ಯು ಶೆಟ್ಟಿ, ಅಧಿತಿ ಶೆಟ್ಟಿ, ಅನನ್ಯ ಶೆಟ್ಟಿ, ಸಂಸ್ಥೆಯ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.