ಬೆಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಉಜಿರೆಯ ಹಳೆಪೇಟೆ ನಿವಾಸಿ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಬೆಂಗಳೂರು ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಜೊತೆ ದೂರವಾಣಿ ಸಂಪರ್ಕದ ಮೂಲಕ ಸ್ನೇಹ ಬೆಳೆಸಿ, ಆಕೆಯೊಂದಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಉಜಿರೆ ಟಿ.ಬಿ ಕ್ರಾಸ್ ನಿವಾಸಿ ಮಹಮ್ಮದ್ ಅಮನ್ ಎಂಬವರ ಮೇಲೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ಟಿಬಿ ಕ್ರಾಸ್ ನಿವಾಸಿ ಉಜಿರೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮಹಮ್ಮದ್ ಅಬಿ ಎಂಬವರ ಪುತ್ರ ಮಹಮ್ಮದ್ ಅಮನ್ ರವರನ್ನು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಕೆಂಗೇರಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಆರೋಪಿ ಮಹಮ್ಮದ್ ಅಮನ್ ಸುಮಾರು ಆರು ತಿಂಗಳಿನಿಂದ ಆತನ ಸ್ನೇಹಿತೆಯ ಮುಖಾಂತರ ಆಕೆಯ ಉಜಿರೆಯ ಪಿಜಿಯಲ್ಲಿ ವಾಸವಾಗಿದ್ದ ಸಂತ್ರಸ್ತ ಹುಡುಗಿಯ ದೂರವಾಣಿ ಸಂಖ್ಯೆ ಪಡೆದುಕೊಂಡು ಮಾತಿನ ಮೂಲಕ ಮರಳು ಮಾಡಿ ಆಕೆಯ ಬೆತ್ತಲೆ ಚಿತ್ರವನ್ನು ಪಡೆದುಕೊಂಡು, ತನ್ನೊಂದಿಗೆ ತಿರುಗಾಡಲು ಬರುವಂತೆ ಒತ್ತಾಯಿಸಿದ್ದು, ನಿರಾಕರಿಸಿದ್ದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು.
ಈ ಬಗ್ಗೆ ಬಾಲಕಿಯ ಮನೆಯವರಿಗೆ ವಿಚಾರ ತಿಳಿದು ಬೆಂಗಳೂರಿನ ಕೆಂಗೇರಿ ಪೋಲೀಸ್ ಠಾಣೆಂಗೆ ದೂರು ನೀಡಿದ್ದು, ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.