ಉಜಿರೆ: ಉಜಿರೆ-ಬೆಳಾಲು-ಕುಪ್ಪೆಟ್ಟಿ ಸಂಪರ್ಕಿಸುವ ಸುಮಾರು 24.75 ಕಿ.ಮಿ.ರಸ್ತೆಯು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ.28.96 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಇದರ ಅಂಗವಾಗಿ ಬೆಳಾಲು ಕಡೆಗೆ ಪ್ರಯಾಣಿಸವವರು ಪೆರ್ಲ-ಮುಂಡತ್ತೋಡಿ-ನಿನ್ನಿಕಲ್ಲು ರಸ್ತೆ ಮೂಲಕವಾಗಿ ಸಂಚರಿಸಲು ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಉಜಿರೆಯಿಂದ ಓಡಲ ಚಾಮುಂಡಿ ನಗರದ ವರೆಗೆ ಕಾಂಕ್ರಿಟಿಕರಣ ನಡೆಯುತ್ತಿದೆ. ಈಗಾಗಲೇ ಬೆಳಾಲು ಕ್ರಾಸ್ನಿಂದ ಉಂಡ್ಯಾಪು ನಗರದ ವರೆಗೆ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಓಡಲವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಾರಂಭಗೊಂಡಿರುವುದರಿಂದ ಈ ಭಾಗದ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ.
ಅದರಂತೆ ಬೆಳಾಲು ಪೇಟೆಯಲ್ಲಿ 300 ಮೀಟರ್ ರಸ್ತೆ ಕಾಂಕ್ರಿಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.