ಪಾರೆಂಕಿ: ಇಲ್ಲಿಯ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.27ರಿಂದ 28ರವರೆಗೆ ನಡೆಯಲಿದೆ.
ಜ.27ರಂದು ಸಾಮೂಹಿಕ ಪ್ರಾರ್ಥನೆ, ತೋರಣ ಧ್ವಜಾರೋಹಣ, ಶ್ರೀ ಮಹಾಗಣಪತಿ ಹೋಮ, ಪಂಚವಿಂಶತಿ ಕಲಾಶಾಭಿಷೇಕ, ಪ್ರಧಾನ ಹೋಮ, ಚಂಡಿಕಾಯಾಗ, ಮಹಾಪೂಜೆ, ಪುಣ್ಯಾಹುತಿ, ಅನ್ನಸಂತರ್ಪಣೆ, ಸಂಜೆ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿಯವರಿಂದ ಭಜನೆ, ಸಹಸ್ರನಾಮಾರ್ಚನೆ, ಹೂವಿನ ಪೂಜೆ, ಸೇವೆಗಳು, ಸಂಜೆ 7.00 ರಿಂದ ಶ್ರೀ ಕೊಡಂಗೆತ್ತಾಯ ದೈವದ ಭಂಡಾರ ಏರುವುದು, 8.00ಕ್ಕೆ ಸಭಾ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ಭಕ್ತಿ ಗೀತೆ, ಭಾವ ಗೀತೆ, ಜನಪದ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ರಿಂದ ಶ್ರೀದೇವಿ ಸನ್ನಿಧಿಯಲ್ಲಿ ರಂಗಪೂಜೆ, ಶ್ರೀ ಮಹಿಷಮರ್ಧಿನಿ ಅಮ್ಮನವರ ಉತ್ಸವ, ಕೊಡಂಗೆತ್ತಾಯ ದೈವದ ನೇಮ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಪ್ರಸಾದ ವಿತರಣೆ,
ಜ. 28ರಂದು ನವಕ ಕಲಶಾಭಿಷೇಕ, ಪ್ರಧಾನ ಹೋಮ, ಮಹಾಪೂಜೆ, ತೋರಣ ಧ್ವಜರೋಹಣ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಪ್ರಸನ್ನ ಪೂಜೆ, ಪ್ರಸಾದ ಭೋಜನಾ ನಡೆಯಲಿದೆ.