ಉಜಿರೆ : ಉಡುಪಿ ಜಿಲ್ಲಾ ಬೈಂದೂರು ತಾಲೂಕಿನಲ್ಲಿ ನೂತನವಾಗಿ ಆಯ್ಕೆಯಾದ ರಾಜ್ಯ ಸರಕಾರಿ ಶಿಕ್ಷಕರ ಸಂಘದ ಸದಸ್ಯರು ಉಜಿರೆ ಶ್ರೀ. ಧ. ಮಂ.ಹಿ. ಪ್ರಾ. ಶಾಲೆಗೆ ಭೇಟಿ ನೀಡಿ ಶಾಲಾ ಭೌತಿಕ ಸವಲತ್ತುಗಳು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೈಂದೂರು ರಾಜ್ಯ ಸರಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ, ಖಜಾಂಚಿ ಅಚ್ಚುತ ಬಿಲ್ಲವ, ಉಪಾಧ್ಯಕ್ಷೆ ಗಿರಿಜಾ ಮೊಗೇರ್ತಿ, ನಾಗರತ್ನ, ಮಲ್ಲಿಕಾ ಶೆಟ್ಟಿ, ಮಂಜುನಾಥ ದೇವಾಡಿಗ, ಸುಬ್ರಹ್ಮಣ್ಯ ಗಾಣಿಗ, ದಯಾನಂದ ಪಟ್ಕರ್, ಗಣೇಶ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಭಾರತಿ ಶಾಲಾ ಚಟುವಟಿಕೆಗಳ ಮಾಹಿತಿ ನೀಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.