ಪಾರೆಂಕಿ ಮಾರಿಗುಡಿ ಶ್ರೀ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ತ್ರೆಯೋದಶ ಪ್ರತಿಷ್ಠಾ ವರ್ಧಂತ್ಯುತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪರಿವಾರ ದೈವಗಳ ವಾರ್ಷಿಕ ದೊಂಪದಬಲಿ ನೇಮೋತ್ಸವ

 

ಪಾರೆಂಕಿ: ಇಲ್ಲಿಯ ಮಾರಿಗುಡಿ ಶ್ರೀ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಡಾ| ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ತ್ರೆಯೋದಶ ಪ್ರತಿಷ್ಠಾ ವರ್ಧಂತ್ಯುತ್ಸವ ಸಹಿತವಾಗಿ ಪರಿವಾರ ದೈವಗಳ ವಾರ್ಷಿಕ ದೊಂಪದಬಲಿ ನೇಮೋತ್ಸವವು ಜರುಗಿತು.
ಅಂದು ಬೆಳಿಗ್ಗೆ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಪುಣ್ಯಾಹ, ಪಂಚಗವ್ಯ ಅಷ್ಟದ್ರವ್ಯ ಗಣಹೋಮ, ನವ ಕಲಶ ಪ್ರತಿಷ್ಠೆ, ಪ್ರಧಾನ ಹೋಮ ನಡೆದು ಗ್ರಾಮ ದೈವದ ತೋರಣ ಮುಹೂರ್ತ, ತಾರಿ ಪ್ರಶ್ನೆ, ನವಕ ಕಲಶಾಭಿಷೇಕ, ವಿಶೇಷ ಸರ್ವಾಂಲಂಕಾರ ಸಹಿತ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಸಂಜೆ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಂಗೆತ್ತಾಯ ಮತ್ತು ಇತರ ಪರಿವಾರ ದೈವಗಳ ಬಂಡಾರ ಅದ್ದೂರಿ ಮೆರವಣಿಗೆಯೊಂದಿಗೆ ಆಗಮಿಸಿ, ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ದೀಪಾರಾದನೆ ಸಹಿತ ವಿಶೇಷ ಗದ್ದಿಗೆ ಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಿತು ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ಈ ಸಂದರ್ಭದಲ್ಲಿ ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ ಶ್ರೀಧರ ರಾವ್, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ ಸನತ್ ಕುಮಾರ್ ಪಡಿವಾಳ್ ಮೂಡಾಯೂರುಗುತ್ತು ಮತ್ತು ಕುಟುಂಬಸ್ಥರು, ಆಡಳಿತ ಮಂಡಳಿ ಕಾಯಾಧ್ಯಕ್ಷ ಡಾ| ಕೆ.ಎಸ್ ಬಲ್ಲಾಳ್, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮತಿ ಸದಸ್ಯರು , ಊರ-ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.