ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಬಲಿ ಉತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  

ಉಜಿರೆ : ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ವರ್ಷಾವಧಿ ಜಾತ್ರಾ ಮಹೋತ್ಸವವು ಜ. 21 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

ಸುಮಾರು 5000  ಭಕ್ತಾದಿಗಳು ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು.  ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ತಾಂತ್ರಿಕ ವಿಧಿ ವಿಧಾನಗಳೊಂದಿಗೆ  ಶ್ರೀ ದೇವರ ಪಲ್ಲಕಿ ಉತ್ಸವ ,ಬಂಡಿ ಉತ್ಸವ ಸಹಿತ ಬೆಳ್ಳಿ ರಥ ಉತ್ಸವ ನಡೆಯಿತು.

ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಶ್ರೀ ಕೃಷ್ಣಾನುಗ್ರಹ ಸಭಾ ಭವನದ ಅನ್ನಛತ್ರದಲ್ಲಿ ಪಲ್ಲ ಪೂಜೆ ನಡೆಯಿತು. ಶರತ್ ಕೃಷ್ಣ ಪಡುವೆಟ್ನಾಯ ,ಸೇವಾಕರ್ತರಾದ ಪ್ರವೀಣ ಕುಮಾರ ಇಂದ್ರ,ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್, ಪಾಂಡುರಂಗ ಬಾಳಿಗಾ, ಮೋಹನ ಶೆಟ್ಟಿಗಾರ್, ರಾಘವೇಂದ್ರ ಬೈಪಾಡಿತ್ತಾಯ, ರಾಜಾರಾಮ ಶರ್ಮ, ರವಿ ಚಕ್ಕಿತ್ತಾಯ, ರಾಮಚಂದ್ರ ಭಂಡಾರ್ಕರ್, ಜಯಂತ ಶೆಟ್ಟಿ, ಉಜಿರೆ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ಪಿ.ಹೆಚ್, ಕಾರ್ಯದರ್ಶಿ ಜಯಂತ್ ಯು.ಬಿ, ಪರಾರಿ ವೆಂಕಟ್ರಮಣ  ಹೆಬ್ಬಾರ್  ಮೊದಲಾದವರು ಉಪಸ್ಥಿತರಿದ್ದರು.  ಊರ ಪರವೂರ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.

ಶಾರದಾ ಮಂಟಪದ ಮುಂಭಾಗದಲ್ಲಿ  ಶ್ರೀನಿವಾಸ ಬೈಪಾಡಿತ್ತಾಯ ಹಾಗು ಉಜಿರೆಯ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ನಡೆಯಿತು. ರಾತ್ರಿ  ಶ್ರೀ ಜನಾರ್ದನ ಸ್ವಾಮಿ ಹಾಗು ಮಂಜುಲೇಶ ದೇವರ  ವಿವಿಧ ವಾದ್ಯವಾದನಗಳ ಸುತ್ತು ಬಲಿ ನಡೆದು ಮಧ್ಯ ರಾತ್ರಿ ವೇಳೆ  ಶ್ರೀ ಮಹಾರಥೋತ್ಸವ ನಡೆಯಲಿದೆ.

 

ಬುಧವಾರ ರಾತ್ರಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ವಿದ್ಯುಕ್ತವಾಗಿ ನಡೆಯಿತು.  ಶುಕ್ರವಾರ  ಬೆಳಿಗ್ಗೆ ಕವಾಟೋದ್ಘಾಟನೆ ನಡೆದು  ಸಂಜೆ ಶ್ರೀ ದೇವರ ಅವಭ್ರತ ಸ್ನಾನ ಹಾಗು ಧ್ವಜಾವರೋಹಣ   ನಡೆದು ಶನಿವಾರ ಕಲಶಾಭಿಷೇಕ ಹಾಗು ಸಂಪ್ರೋಕ್ಷಣೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.