ವೇಣೂರು: ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಯಾಗಿರುವ ಮಹತ್ವಕ್ಷಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಭವಿಷ್ಯದ ಉತ್ತಮ ಕಾರ್ಯಕ್ರಮವಾಗಿದೆ. ಜನರಿಗೆ ಶುದ್ಧ ಕುಡಿಯವ ನೀರು ಲಭಿಸುವಂತೆ ಮಾಡುವಲ್ಲಿ ಪಂಚಾಯತ್ ಸಿಬ್ಬಂದಿ, ತಳಮಟ್ಟದ ಕಾರ್ಯಕರ್ತರು ಸೇವೆಯ ಅವಕಾಶವೆಂದು ತಿಳಿದು ಕಾರ್ಯಪ್ರವೃತರಾಗಬೇಕು ಎಂದು ಅರಂಬೋಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸಮುದಾಯದ ಜಂಟಿ ಆಶ್ರಯದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಜ. 21ರಂದು ವೇಣೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾದಡಿರು.
ಕಾರ್ಯಾಗಾರವನ್ನು ವೇಣೂರು ಗ್ರಾ.ಪಂ.ನ ಉಪಾಧ್ಯಕ್ಷ ಆರುಣ್ ಕ್ರಾಸ್ತ ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಆಸ್ಪತ್ರೆ ಪ್ರಯೋಗಾಲಯದ ಜೂನಿಯರ್ ಕೆಮಿಸ್ಟಿ ಆದಿತ್ಯ ರಾವ್ ಅವರು ಪರೀಕ್ಷಾ ವಿಧಾನದ ಕುರಿತು ಮಾಹಿತಿ ನೀಡಿದರು. ಬಳಿಕ ಜಲಜೀವನ್ ಮಿಷನ್ನ ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನದ ಹೆಚ್.ಆರ್.ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ. ಅವರು ಜಲಜೀವನ್ ಮಿಷನ್ ಉದ್ದೇಶ ಮತ್ತು ಅಗತ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಎಸ್ಡಿಯಂ ಐಟಿಐಯ ಪಿಟರ್ ಜೋಸೆಪ್ ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲಾ ಜಲಜೀವನ್ ಮಿಷನ್ನ ಹೆಚ್.ಆರ್.ಡಿ ಚರಣ್ರಾಜ್ ಅವರು ತಮ್ಮ ತಮ್ಮ ಚಟುವಟಿಕೆಗಳನ್ನು ಹಂಚಿಕೊಂಡರು. ವೇಣೂರು ಗಾ.ಪಂ.ನ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ. ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.