ಅಳದಂಗಡಿ: ಶ್ರೀ ಸೋಮನಾಥೇಶ್ವರಿ ಸನ್ನಿಧಿಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ, ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಒಡಿಯೂರು ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮಿಜೀ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್, ಕುಲದೀಪ್ ಮೂಡಬಿದರೆ, ಮಧುರಾ ಪದ್ಮಪ್ರಸಾದ್ ಅಜಿಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಶಿರ್ಲಾಲು ಸಿಎ ಬ್ಯಾಂಕ್ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿಹೆಚ್ ನಿತ್ಯಾನಂದ ಶೆಟ್ಟಿ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ರಂಗಪೂಜೆ, ವಿಶೇಷ ಪೂಜೆ, ದೇವರ ದರ್ಶನ ಬಲಿ, ಭಜನೆ, ವಸಂತ ಕಟ್ಟೆ ಪೂಜೆ, ಚಂದ್ರಮಂಡಲ ಉತ್ಸವ, ಅರಮನೆ ಬೀದಿ ಸವಾರಿ, ಶ್ರೀ ಮೂಜುಲ್ನಾಯ ದೈವ ಹಾಗೂ ಪರಿವಾರ ದೈವಗಳ ನೇಮ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಹಾಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ತಂತ್ರಿಗಳು, ಅರ್ಚಕರು, ಗ್ರಾಮಸ್ಥರು, ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.