ಬೆಳ್ತಂಗಡಿ: ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಬೆಳ್ತಂಗಡಿಯ ನೃತ್ಯ ನಿರ್ದೇಶಕರಾದ ಜಿತೇಶ್ ಕುಮಾರ್ ಇವರ ಶಿಷ್ಯೆಯಾಗಿರುವ ಪ್ರತೀಕ್ಷಾ ಲಾಯಿಲ ಇವರು ಮಂಗಳೂರು ಅಬ್ಬಕ್ಕ ಲಿಟಲ್ ಚಾಮ್ಸ್ ವಿಜೇತೆಯಾಗಿದ್ದು ಆಗಿದ್ದು ಇದೀಗ ಝೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಇವರು ಲಾಯಿಲ ಗ್ರಾಮದ ಶ್ರೀಮತಿ ಬೇಬಿ ಮತ್ತು ಜಿ. ವಿನಯ್ ದಂಪತಿಯ ಸುಪುತ್ರಿ.