ಕಳಿಯ : ಇಲ್ಲಿಯ ಕಳಿಯ ಗ್ರಾಮದ ಕೃಷಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಜ.21 ರಂದು ಕಳಿಯ ಕೃಷಿ ಪತ್ತಿನ ಸಹಕಾರಿ ಸಭಾ ಭವನದಲ್ಲಿ ಜರುಗಿತು.
2020-2021ನೇ ಸಾಲಿನ ಮಣ್ಣು ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಕಳಿಯ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ರೈತರು ಕಡಿಮೆ ಖರ್ಚುನಲ್ಲಿ ಹೆಚ್ಚಿನ ಪ್ರಮಾಣದ ಲಾಭ ಗಳಿಸಲು ಇಂತಹ ತರಬೇತಿಯನ್ನು ಅಗತ್ಯವಾಗಿದೆ ಎಂದು ಹೇಳಿದರು.
ಬೆಳ್ತಂಗಡಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಮತ್ತು ಮೂಡಿಗೆರೆ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕರಾಗಿ ಶಿವಕುಮಾರ್ ಮಣ್ಣು ಪರೀಕ್ಷೆ ಮಾದರಿ, ಬೌತಿಕ, ರಾಸಾಯನಿಕ, ಜೈವಿಕ ಅಂಶಗಳ ಬಳಕೆ ಬಗ್ಗೆ ಕೃಷಿಕರಿಗೆ ಸಂಕ್ಷಿಪ್ತವಾದ ಮಾಹಿತಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತು ಸದಸ್ಯ ಪ್ರವೀಣ್ ಕುಮಾರ್ ಕೊಯ್ಯೂರು, ಕಳಿಯ ಪಂಚಾಯತು ಸದಸ್ಯೆ ಇಂದಿರಾ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಉಜಿರೆ ವೇದಿಯಲ್ಲಿ ಉಪಸ್ಥಿತರಿದ್ದರು.
ಕಳಿಯ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಣಾಧಿಕಾರಿ ಸತ್ಯ ಶಂಕರ್ ಭಟ್, ನಿರ್ದೇಶಕ ಹರಿದಾಸ್ ಪಡಂತ್ತಾಯ, ಸ್ಥಳೀಯ ಕೃಷಿಕರಾದ ಗಣಪತಿ ಭಟ್ ಬಳ್ಳಿ, ಸದಾಶಿವ ನಾೈಯ್ಕ, ನೇವಿಲ್ ಸ್ಟೀವನ್ ಮೊರಾಸ್, ಮೋಹನ ಗೌಡ, ಗಿರಿಯಪ್ಪ ಗೌಡ, ಲೋಹಿತಾಶ್ವ ಗೌಡ, ಐತಪ್ಪ ಪೂಜಾರಿ, ಸೋಮನಾಥ ಹೆಗ್ಡೆ ಮತ್ತು ರೈತರು ತರಬೇತಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಣ್ಣು ಮಾದರಿ ತೆಗೆಯುವ ವಿಧಾನ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲಾಯಿತು. ಕೃಷಿ ಇಲಾಖೆ ಸಿಬ್ಬಂದಿ ವರ್ಗದವರು ಸಹಕರಿಸಿದರು. ಕೊಕ್ಕಡ ಮತ್ತು ವೇಣೂರು ಕೃಷಿ ಸಂಪರ್ಕ ಕೃಷಿ ಅಧಿಕಾರಿ ಚಿದಾನಂದ ಎಸ್. ಹೂಗಾರ್ ಸ್ವಾಗತಿಸಿ, ಕಾರ್ಯನಿರ್ವಹಿಸಿದರು.