ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯಿತುಗಳ ಅಧ್ಯಕ್ಷ-ಉಪಾಧ್ಯಕ್ಷ ಮಿಸಲಾತಿ ನಿಗದಿ ಪ್ರಕ್ರಿಯೆ ಜ.27ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತ್ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಮೀಸಲಾತಿಯಲ್ಲಿ ನಿಗದಿಪಡಿಸುವ ಕಾರ್ಯ ವಿವಿಧ ಸ್ಥಳಗಳಲ್ಲಿ ಜ.18ರಿಂದ ಆರಂಭಗೊಂಡಿದ್ದು, ಜ.28ರ ತನಕ ನಡೆಯಲಿದೆ.
ಡಿ.27ರಂದು ಬೆಳ್ತಂಗಡಿ ತಾಲೂಕಿನಲ್ಲಿ 46 ಗ್ರಾಮ ಪಂಚಾಯತುಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಡಿ.30ರಂದು ಮತ ಎಣಿಕೆ ನಡೆಸಲಾಗಿತ್ತು. ಈಗಾಗಲೇ ಸರಕಾರ ತಾಲೂಕಿನಲ್ಲಿ ಯಾವ, ಯಾವ, ವರ್ಗದ ಎಷ್ಟೆಷ್ಟು ಮಂದಿ ಅಧ್ಯಕ್ಷ-ಉಪಾಧ್ಯಕ್ಷರಾಗಬೇಕು ಎಂದು ಸಂಖ್ಯೆ ನಿಗದಿ ಪಡಿಸಿ, ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಇದೀಗ ಯಾವ ಪಂಚಾಯತದಲ್ಲಿ ಯಾವ ವರ್ಗದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎಂಬುದನ್ನು ನಿಗದಿ ಪಡಿಸುವ ಕಾರ್ಯ ನಡೆಯಲಿದ್ದು, ಈಗಾಗಲೇ ದ.ಕ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕುಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಈ ಬಗ್ಗೆ ಚುನಾಯಿತು ಎಲ್ಲಾ ಗ್ರಾ.ಪಂ ಸದಸ್ಯರಿಗೆ ಹಾಗೂ ಚುನಾವಣೆ