ಉಜಿರೆ: ಇಲ್ಲಿಯ ವಿನಾಯಕನಗರ (ನೇಕಾರ ಪೇಟೆ) ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವವು ಫೆ.13 ರಿಂದ 15 ರವರೆಗೆ ಜರುಗಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಜ.21 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಪ್ರತಿಷ್ಠಾ ಮಹೋತ್ಸವದ ಗೌರವಾಧ್ಯಕ್ಷ ಯು ವಿಜಯರಾಘವ ಪಡ್ವೆಟ್ನಾಯರವರು ಬಿಡುಗಡೆಗೊಳಿಸಿದರು.
ಪುನಃ ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ನಾಯ, ಕಾಯಾಧ್ಯಕ್ಷ ವಿಶ್ವನಾಥ ನೇಕಾರ ಕಕ್ಕರಬೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ಬಾಲಕೃಷ್ಣ ಗೌಡ, ಕಾರ್ಯಾಧ್ಯಕ್ಷ ರಾಜಪ್ಪ ನೇಕಾರ ಬನಶಂಕರಿ, ಪ್ರಧಾನ ಕಾರ್ಯದರ್ಶಿ ಹರೀಶ್ ನೇಕಾರ, ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಹರಿಪ್ರಸಾದ ನೇಕಾರ, ಗೌರವ ಸಲಹೆಗಾರ ಕೆ. ಮೋಹನ ಕುಮಾರ್ ಲಕ್ಷ್ಮೀ ಗ್ರೂಪ್ಸ್, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ರಸರಾಗ, ಜಯಂತ ಶೆಟ್ಟಿ, ಮೋಹನ ಶೆಟ್ಟಿಗಾರ ಮೊದಲಾದವರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.