ಅಳದಂಗಡಿ: ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಸಹಯೋಗದಲ್ಲಿ, ಕೋವಿಡ್-19 ಲಸಿಕಾ ಕಾರ್ಯಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿಯಲ್ಲಿ ಜ.20 ರಂದು ನಡೆಯಿತು.
ಕೊರೊನಾ ಲಸಿಕೆ ನೀಡುವ ವೇಳೆ ರೋಗಿಯ ಮಧುಮೇಹ, ಸಕ್ಕರೆ ಖಾಯಿಲೆ, ಸೇರಿದಂತೆ ಬೇರೆ ಯಾವುದಾದರೂ ರೋಗವಿದೆಯೋ ಎಂಬ ಮಾಹಿತಿ ಪಡೆಯಲಾಗುತ್ತದೆ.
64 ಮಂದಿಗೆ ಲಸಿಕೆ:
ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕೋವಿಡ್ 19 ಲಸಿಕಾ ಕಾರ್ಯಕ್ರಮದಲ್ಲಿ ಸುಮಾರು 64 ಮಂದಿಗೆ ಲಸಿಕೆ ನೀಡಲಾಯಿತು.
ಆರೋಗ್ಯ ಕಾರ್ಯಕರ್ತರಿಗೆ, ಸ್ಟಾಪ್ ನರ್ಸ್ಗಳಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಡಾಕ್ಟರ್ಗೆ ಮೊದಲನೆದಾಗಿ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯಧಿಕಾರಿ ಡಾ| ಕಲಾಮಧು, ಅಳದಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರ, ತಾ. ಬಿಹೆಚ್ಇಒ ಪುಷ್ಪ, ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು, ಹಿರಿಯ -ಕಿರಿಯ ಆರೋಗ್ಯ ಸಹಾಯಕರು ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.