ಬೆಳ್ತಂಗಡಿ: ಪ್ರತಿಭೆಗಳಿಗೆ ಪ್ರೋತ್ಸಾಹ, ಅಸಕ್ತರಿಗೆ ಸಹಕಾರ, ಯುವ ಸಮುದಾಯಕ್ಕೆ ವ್ಯಕ್ತಿತ್ವ ವಿಕಸನದ ತರಬೇತಿ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಹಲವು ಸೇವಾ ಕಾರ್ಯಗಳೊಂದಿಗೆ ಮುಂಚೂಣಿಯಲ್ಲಿರುವ 18 ರಿಂದ 40 ವರ್ಷದೊಳಗಿನ ಯುವ ಸಮುದಾಯವೇ ತುಂಬಿರುವ ತಾಲೂಕಿನ ಪ್ರತಿಷ್ಠಿತ ಸಂಸ್ಥೆ ಜೇಸಿಐ ಬೆಳ್ತಂಗಡಿ ಮಂಜುಶ್ರೀಯ 2021ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.27 ರಂದು ಬೆಳ್ತಂಗಡಿ ಜೆಸಿ ಭವನದಲ್ಲಿ ಜರುಗಲಿದೆ ಎಂದು ಜೆಸಿಐ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ತಿಳಿಸಿದರು.
ಅವರು ಜ.20 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್, ಜೇಸಿಐ ವಲಯ 15ರ ವಲಯಾಧ್ಯಕ್ಷೆ ಜೇಸಿಐ ಸೆನೆಟರ್ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷೆ ಜೇಸಿ ಹೇಮಲತಾ ಪಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಸ್ವರೂಪ್ ಶೇಖರ್, ಜೆಸಿಐ ವಲಯಾಧಿಕಾರಿ ಕಿರಣ್ ಕುಮಾರ್ ಶೆಟ್ಟಿ, ಪೂರ್ವ ವಲಯಾಧಿಕಾರಿ ಚಿದಾನಂದ ಇಡ್ಯ, ನಿಯೋಜಿತ ಕಾರ್ಯದರ್ಶಿ ಶಂಕರ ರಾವ್ ಉಪಸ್ಥಿತರಿದ್ದರು.