ಉಜಿರೆ: ಇಲ್ಲಿಯ ಪ್ರಭಾತ್ ಲಾಡ್ಜ್ ಬಳಿ ಹಲವಾರು ವರ್ಷಗಳಿಂದ ಕೃಷಿ ಯಂತ್ರೋಪಕರಣಗಳ ಸರ್ವಿಸ್ ಸೆಂಟರ್ ಆಗಿ ಕಾರ್ಯಚರಿಸುತ್ತಿದ್ದ ಇದರ ಸಹ ಸಂಸ್ಥೆಯಾದ ಕೃಷಿ ಯಂತ್ರೋಪಕರಣ ಸೇಲ್ಸ್ ಮತ್ತು ಸರ್ವಿಸ್ ಸಂಸ್ಥೆಯಾದ ವಿಹಾನ್ ಆಗ್ರೋ ಟೆಕ್ ಜ.20ರಂದು ಪಂಚಮಿ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿದೆ.
ಶ್ರೀನಿವಾಸ ಹೊಳ್ಳ ಇವರು ಗಣಹೋಮ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಈ ಸಂದರ್ಭ ಉಪೇಂದ್ರ ಆಚಾರ್ಯ, ಅಖಿಲೇಶ್ ಆಚಾರ್ಯ ಉಪಸ್ಥಿತರಿದ್ದರು. ಮಾಲಕರಾದ ದಿವಾಕರ ಆಚಾರ್ಯ ಸರ್ವರ ಸಹಕಾರ ಕೋರಿದರು. ಇಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರವಾಗಿ ರೈತರಿಗೆ ಸೇವೆ ನೀಡಲಿದೆ ಎಂದು ಮಾಲಕರು ತಿಳಿಸಿದರು.