ಸುರ್ಯ: ಜನಸ್ನೇಹಿ ಯುವಕ ಸಂಘ ಸುರ್ಯ ಇದರ ವತಿಯಿಂದ ಸುರ್ಯ ವಾಲಿಬಾಲ್ ಲೀಗ್ ಪಂದ್ಯಾಟವು ಬೊಳಿಯಂಜಿ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸುರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಸುರ್ಯದ ಹಿರಿಯ ವಾಲಿಬಾಲ್ ಆಟಗಾರ ಕೃಷ್ಣಪ್ಪ ಕಾನಂಗ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯುವಕ ಸಂಘದ ಸದಸ್ಯರು, ಸ್ಥಳೀಯ ವಾಲಿಬಾಲ್ ಆಟಗಾರರು ಭಾಗವಹಿಸಿದ್ದರು
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಯೊಗೀಶ್ ಸುರ್ಯ ಮಾಲಕತ್ವದ ಕರಣ್ ಎಟಾಕರ್ಸ್ ಸುರ್ಯ ಹಾಗೂ ದ್ವಿತೀಯ ಬಹುಮಾನವನ್ನು ಅಶ್ವತ್ ಭಟ್ ಪಡ್ಪು ಮಾಲಕತ್ವದ ಜೀವಾ ವಾರಿಯರ್ಸ್ ತಂಡಗಳು ಪಡೆದುಕೊಂಡವು. ಸಂಘದ ಅಧ್ಯಕ್ಷ ದೀಕ್ಷಿತ್ ಸುರ್ಯ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.