ಬೆಳ್ತಂಗಡಿ: ದ.ಕ. ಜಿಲ್ಲೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಯ ಸುಮಾರು100ಲಯನ್ಸ್ ಕ್ಲಬ್ಗಳಿಗೆ ಫೆ.21ರಂದು ಜನಪದ ವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾನಪದ ಶೈಲಿಯ ಎಲ್ಲಾ ಪ್ರಕಾರಗಳ ಕಲೆಗಳ ಪ್ರದರ್ಶನ ಹಾಗೂ ಸ್ಫರ್ಧೆಗಳನ್ನು ಹಮ್ಮಿಕೊಂಡು ಕಲಾಸಕ್ತರಿಗೆ ಹಾಗೂ ಯುವ ಪೀಳಿಗೆಗೆ ಅವುಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
ಲಯನ್ಸ್ ಜಿಲ್ಲೆ 317 ಡಿ ಯ 2020-21ರ ನೇತಾರ ರಾಜ್ಯಪಾಲ ಲ. ಗೀತ್ಪ್ರಕಾಶ್ ಪಿಜೆಎಮ್ಎಫ್ರವರು ಈ ಮಹತ್ತರ ಜವಾಬ್ದಾರಿಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ, ಮಾಜಿ ವಲಯಾಧ್ಯಕ್ಷ ಮತ್ತು ಕನಸು ಪ್ರಾಂತೀಯ ಸಮ್ಮೇಳನದ ಅದ್ಭುತ ಯಶಸ್ಸಿನ ರುವಾರಿ ಮಾಜಿ ಪ್ರಾಂತೀಯ ಅಧ್ಯಕ್ಷ ಲ. ನಿತ್ಯಾನಂದ ನಾವರ ಎಮ್.ಜೆ.ಎಫ್. ಇವರಿಗೆ ನೀಡಿ ಮುಖ್ಯ ಸಂಯೋಜಕರಾಗಿ ನೇಮಿಸಿರುತ್ತಾರೆ. ಸಹ ಸಂಯೋಜಕರಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಲ. ವಸಂತ ಶೆಟ್ಟಿ, ಲಯನ್ಸ್ ಕ್ಲಬ್ ಮಾಣಿ ಇದರ ನಿಕಟಪೂರ್ವ ಅಧ್ಯಕ್ಷ ಲ. ಗಂಗಾಧರ ರೈ ಪಿ., ಲಯನ್ಸ್ ಕ್ಲಬ್ ಮುಚ್ಚೂರು – ನೀರುಡೆ ನಿಕಟಪೂರ್ವ ಅಧ್ಯಕ್ಷ ಲ. ಪ್ರದೀಪ್ ಎಲ್. ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಪಂಜ ಇದರ ಮಾಜಿ ಕಾರ್ಯದರ್ಶಿ ಲ. ಶಶಿಧರ ಪಾಲಂಗಾಯ ಇವರನ್ನು ನೇಮಿಸಿರುತ್ತಾರೆ.