ಕಳಿಯ : ಇಲ್ಲಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಕುಳಾಯಿ ಸಮೀಪದ ಶಕ್ತಿ ನಗರ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯವನ್ನು ಎಸೆಯುವ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ರೆಡ್ಯಾಂಡಾಗಿ ಹಿಡಿದು ಪೋಲಿಸರಿಗೆ ಒಪ್ಪಿಸಿ ದ ಘಟನೆ ಜ.19 ರಂದು ರಾತ್ರಿ ನಡೆಯಿತು.
ಕಳೆದ ಸುಮಾರು 4 ತಿಂಗಳುಗಳಿಂದ ರಾತ್ರಿ ವೇಳೆಯಲ್ಲಿ ಕೋಳಿ ತ್ಯಾಜ್ಯವನ್ನು ರಸ್ತೆ ಪಕ್ಕದ ಚರಂಡಿ ಎಸೆಯುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ನಾಯಿ,ನರಿ ಮತ್ತು ಕಾಡು ಪ್ರಾಣಿಗಳು ತಿಂದು ರಸ್ತೆಯಲ್ಲಿ ಚೆಲ್ಲುವುದರಿಂದ ಗಬ್ಬು ವಾಸನೆ ಬರುತ್ತಿದೆ. ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗುತ್ತಿದೆ. ಮಾನವನ ಆರೋಗ್ಯದಲ್ಲಿ ಭೀಕರ ಕಾಯಿಲೆ ಹರಡುವ ಸಾಧ್ಯತೆಗಳೂ ಇವೆ. ಇದನ್ನು ಅರಿತ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಕಾದು ಕುಳಿತು ಪತ್ತೆ ಹಚ್ಚುವ ಶಪತ ಮಾಡಿದರು. ಬೆಳ್ತಂಗಡಿ ಹೃದಯ ಭಾಗದಲ್ಲಿರುವ ಮುಸ್ತಾಪ ಮಾಲೀಕತ್ವದ ಹಲಾಲ್ ಚಿಕ್ಕನ್ ತ್ಯಾಜ್ಯವನ್ನು ಗೇರುಕಟ್ಟೆ ಸಮೀಪದ ಕೆಲಸದಾಲು ಜಮೀರ್ ಪ್ರತಿ ರಾತ್ರಿ ತನ್ನ ಮನೆಗೆ ವಾಪಸಾಗುವ ಸಂದರ್ಭದಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ತಂದು ಈ ಕೃತ್ಯವೆಸಗುವುದು ಮಾಮೂಲಿ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕ ರಲ್ಲಿ ಒಪ್ಪಿಕೊಂಡನು. ಗ್ರಾಮಸ್ಥರು ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ ತ್ಯಾಜ್ಯ ಮತ್ತು ವಾಹನ ಸಮೇತವಾಗಿ ಒಪ್ಪಿಸಿದರು. ವಿಷಯ ತಿಳಿದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ ದರು.ಕಳಿಯ ಪಂಚಾಯತು ವ್ಯಾಪ್ತಿಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವ ಕೆಲಸ ಯತೇಚ್ಚಃವಾಗಿ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಈ ಕೋಳಿ ಅಂಗಡಿ ಪರವಾನಿಗೆಯನ್ನು ರದ್ದು ಪಡಿಸುವಂತೆ ಕಳಿಯ ಪಂಚಾಯತು ಸದಸ್ಯೆ ಹಾಗೂ ಆಶಾ ಕಾರ್ಯಕರ್ತೆ ಸುಭಾಷಿಣಿ,ಕಳಿಯ ಪಂಚಾಯತು ಸದಸ್ಯೆ ಇಂದಿರಾ,ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ, ತಾಲೂಕು ಪಂಚಾಯತು ಮಾಜಿ ಸದಸ್ಯ ಪ್ರದೀಪ್ ಕುಮಾರ್,ಕಳಿಯ ಪಂಚಾಯತು ಮಾಜಿ ಅಧ್ಯಕ್ಷ ಶರತ್ ಕುಮಾರ್, ಸ್ಥಳೀಯರಾದ ಸುಂದರ ನಾಯ್ಕ, ಶ್ರೀನಿವಾಸ್ ಬೇರ್ಕತ್ತೋಡಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದರು.ಹಾಗೂ ಈ ಕೃತ್ಯವನ್ನು ಖಂಡಿಸಿದರು.